ಬಿಡುಗಡೆಗೆ ಸಿದ್ದವಾಗುತ್ತಿದೆ ಉಡುಪಿ ಮೂಲದ ದುಬೈ ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ ನಿರ್ಮಾಣದ ‘ಡಾ.ಮೋಹನ್ ಎಂ.ಬಿ.ಬಿ.ಎಸ್’

Picture of Namma Bedra

Namma Bedra

Bureau Report

ಉಡುಪಿ ಮೂಲದ ದುಬೈನ ಪ್ರಮುಖ ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ ಅವರು ಪ್ರಸ್ತುತಪಡಿಸುತ್ತಿರುವ ‘ಡಾ.ಮೋಹನ್ ಎಂ.ಬಿ.ಬಿ.ಎಸ್’ ತುಳು ಚಲನಚಿತ್ರದ ಚಿತ್ರೀಕರಣವು ಮುಕ್ತಾಯ ಹಂತದಲ್ಲಿದ್ದು ಚಿತ್ರೀಕರಣದ ಅಂತಿಮ ಹಂತವು ( ಹೊರಾಂಗಣ ಚಿತ್ರೀಕರಣ) ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಪ್ರಾರಂಭಗೊಳ್ಳಲಿದ್ದು ಈ ವರ್ಷದ ಅಂತ್ಯದ ವೇಳೆಗೆ ಚಿತ್ರವು ಬಿಡುಗಡೆಗೆ ಸಿದ್ದವಾಗಲಿದೆ.


ಒಬ್ಬ ಸಮರ್ಪಿತ ವೈದ್ಯನ ಸುತ್ತ ಹೆಣೆಯಲಾದ ಈ ಚಿತ್ರವು ಉತ್ತಮ ಕಥಾವಸ್ತುವನ್ನು ಹೊಂದಿದೆ.
ಉತ್ತಮವಾದ ಸಂಗೀತ, ಭಾವನೆಗಳು,ನೈತಿಕ ವೈದ್ಯಕೀಯ ಪದ್ದತಿ ಹಾಗೂ ವೈದ್ಯಕೀಯ ಮಾಫಿಯಾದ ಅಂಶಗಳೂ ಈ ಚಿತ್ರದಲ್ಲಿದೆ.
ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕರಾಗಿರುವ ವೆಂಕಟ್ ಭಾರದ್ವಾಜ್ ಅವರು ‘ಅಮೃತ ಫಿಲ್ಮ್ಸ್’ ಬ್ಯಾನರ್ ನಡಿ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
‘ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ- 2022’ ಪುರಸ್ಕೃತರಾದ,ಮೂಡುಬಿದಿರೆ ಮೂಲದ, ಪುಣೆ ನಿವಾಸಿ ಡಾ.ಸುಧಾಕರ ಶೆಟ್ಟಿ ಅವರ ಯೋಜನೆಯಲ್ಲಿ ಈ ಚಿತ್ರವು ನಿರ್ಮಾಣಗೊಳ್ಳುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top