ನಾಳೆ ಬೆದ್ರಕ್ಕೆ ಬರಲಿದ್ದಾರೆ ರವಿ ಮಾಸ್ಟರ್

Picture of Namma Bedra

Namma Bedra

Bureau Report

ಝೀ ಕನ್ನಡ ವಾಹಿನಿಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಖ್ಯಾತಿಯ ಕೊರಿಯೋಗ್ರಾಫರ್ ಮಾಸ್ಟರ್ ರವಿ ಶೇಟ್ ಅವರು ನಾಳೆ ಮೂಡುಬಿದಿರೆಯ ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಲಿದ್ದಾರೆ ಎಂದು ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಸಂಸ್ಥಾಪಕ ಅನೀಶ್ ಅವರು ತಿಳಿಸಿದ್ದಾರೆ.
ಈ ಹಿಂದೆ ಖ್ಯಾತ ನೃತ್ಯ ನಿರ್ದೇಶಕ ತಾರಕ್ ಮಾಸ್ಟರ್ ಅವರು ಇದೇ ಸಂಸ್ಥೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ, ನೃತ್ಯದ ಬಗ್ಗೆ ಮಾಹಿತಿ ನೀಡಿದ್ದರು‌.
ನಾಳೆ ಸಂಜೆ 3-30 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ರವಿ ಮಾಸ್ಟರ್ ಅವರು ಭಾಗವಹಿಸಲಿದ್ದು ಖ್ಯಾತ ಕೊರಿಯೋಗ್ರಾಫರ್ ಅವರಿಂದ ಮಾಹಿತಿ ಪಡೆದುಕೊಳ್ಳಲು ನಮ್ಮ ಸಂಸ್ಥೆಗಳ ವಿದ್ಯಾರ್ಥಿಗಳಿಗಿದೊಂದು ಸುವರ್ಣಾವಕಾಶವಾಗಿದೆಯೆಂದು ಅನೀಶ್ ಹೇಳಿದ್ದಾರೆ ‌

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top