ಮೂಲ್ಕಿಯ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಅನ್ನಪೂರ್ಣ ಸಭಾಗೃಹದಲ್ಲಿ ಭಾನುವಾರ ನಡೆದ ‘ಹೊಸ ಅಂಗಣ’ ಪತ್ರಿಕೆಯ ದಶಮಾನೋತ್ಸವ ಸಂದರ್ಭದಲ್ಲಿ ಲೇಖಕ ಎಂ.ಬಾಲಕೃಷ್ಣ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಅಂಗವಿಕಲನಾದರೂ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಅನ್ಯಾಯದ ವಿರುದ್ಧ ಕಾನೂನು ಹೋರಾಟ ಮಾಡಿ ನ್ಯಾಯ ಒದಗಿಸಿಕೊಡುವ ಜೊತೆಗೆ ಕಳೆದ 50 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಸಾವಿರಾರು ಲೇಖನಗಳು,ಕಥೆ,ಕವನಗಳ ಮೂಲಕ ಗಮನಸೆಳೆದಿರುವ ಬಾಲಕೃಷ್ಣ ನಾಯಕ್ ಅವರನ್ನು ಉಡುಪಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್, ಧರ್ಮದರ್ಶಿ ಹರಿಕೃಷ್ಣ ಪುನರೂರು,ಕೆ.ಭುವನಾಭಿರಾಮ ಉಡುಪ, ಪ್ರದೀಪ್ ಕುಮಾರ್ ಕಲ್ಕೂರ,ಸುದರ್ಶನ ಎಂ. ವಸಂತ ಬೆರ್ನಾರ್ಡ್,ಸೂರ್ಯಕಾಂತ ಜೆ.ಸುವರ್ಣ, ಚಂದ್ರಶೇಖರ ಸುವರ್ಣ, ಮುಹಮ್ಮದ್ ಹಬೀಬುಲ್ಲಾ,ಭಾಸ್ಕರ ಹೆಗ್ಡೆ,ವಾಸು ಪೂಜಾರಿ,ಕಾಂತು ಸೇರ್ವೆಗಾರ, ಪತ್ರಿಕೆಯ ಸಂಪಾದಕ ಡಾ|ಹರಿಶ್ಚಂದ್ರ ಪಿ.ಸಾಲ್ಯಾನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












