ಅಕ್ಟೋಬರ್ ಬಂತೆಂದರೆ ಮೂಡುಬಿದಿರೆಯಲ್ಲಿ ಸಾಲು ಸಾಲು ತುಳು ನಾಟಕಗಳು.ಇಲ್ಲಿನ ನಾಟಕಪ್ರೇಮಿಗಳೂ ಸಹಕಾರ ನೀಡುವುದರಿಂದ ತುಳು ನಾಟಕಗಳೂ ಹೆಚ್ಚು ಪ್ರದರ್ಶನಗೊಳ್ಳುತ್ತಿದೆ.





ಅಕ್ಟೋಬರ್ 10 ರಂದು ಕಾರ್ಕಳದ ತೆಲಿಕೆದ ತೆನಾಲಿ ತಂಡದ ‘ರಾಯೆರುಲ್ಲೆರ್’ ನಾಟಕ ಪ್ರದರ್ಶನವಿದ್ದರೆ ಅದೇ ದಿನ ‘ಕಾಡಗಗ್ಗರ’ ಎಂಬ ನಾಟಕವೂ ಇದೆ.
ಅಕ್ಟೋಬರ್ 11 ನೇ ತಾರೀಕಿನಂದು ಬಂಟರ ಸಂಘ ಮತ್ತು ಯುವ ಬಂಟರ ಸಂಘದ ವತಿಯಿಂದ ಕಾಪು ರಂಗತರಂಗ ಕಲಾವಿದರ ‘ವಿಕ್ರಮ್ ವೇದ’, ಅಕ್ಟೋಬರ್ 24 ರಂದು ಪಡುಕೊಣಾಜೆ ಶಾಲಾ ದಶಮಾನೋತ್ಸವದ ಪ್ರಯುಕ್ತ ಚೈತನ್ಯ ಕಲಾವಿದರು ಬೈಲೂರು ಅವರ ‘ಊರುಬೋಡು ಪುದರ್ ಬೊಡ್ಚಿ’, ಮರುದಿನ ಅಂದರೆ 25 ನೇ ತಾರೀಕಿನಂದು ದೇವದಾಸ್ ಕಾಪಿಕಾಡ್ ಅವರ ‘ಸುಣ್ಣದ ಬೊಟ್ಟು’, ಅದೇ ದಿನ ಸಿಂಧೂರ ಕಲಾವಿದೆರ್ ಕಾರ್ಲ ತಂಡದವರಿಂದ ‘ಒಂಜಿ ಗುಜ್ಜೆದ ಕಥೆ’, ಅಕ್ಟೋಬರ್ 31 ರಂದು ಮಣಿ ಕೋಟೆಬಾಗಿಲು ಅವರ ಪಿಂಗಾರ ತಂಡದ ‘ಪ್ರಶ್ನಾರ್ಥಕ’, ನವೆಂಬರ್ 7 ರಂದು ಸುಂದರ ರೈ ಮಂದಾರ ಅವರ ಸಾರಥ್ಯದ ಅಮ್ಮ ಕಲಾವಿದೆರ್ ಕುಡ್ಲ ತಂಡದ ‘ ಚಿ.ಸೌ.ಸುಮಂಗಲಾ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.












