ಕಂಬಳದಲ್ಲಿ ಹ್ಯಾಟ್ರಿಕ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿರುವ ಹಿರಿಯ ಓಟಗಾರ ಹೊಸ್ಮಾರು ಈದು ಪಡ್ಯಾರಮನೆಯ ಅಶೋಕ್ ಕುಮಾರ್ ಜೈನ್ ಅವರು 2026 ನೇ ಸಾಲಿನ ‘ಕಂಬಳ ಅಕಾಡೆಮಿ ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ.
ದ.ಕ,ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕಂಬಳ ಸಂರಕ್ಷಣೆ,ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ಕೊಡಲ್ಪಡುವ ಈ ಪ್ರಶಸ್ತಿ ಪ್ರದಾನ ಸಮಶರಂಭವು ಅ.8 ಗುರುವಾರ ಬೆಳಿಗ್ಗೆ 11-30ಕ್ಕೆ ಒಂಟಿಕಟ್ಟೆಯ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ನಡೆಯಲಿದೆ.
ಹಿರಿಯಡ್ಕ ಬೊಮ್ಮರಬೆಟ್ಟು ಯುವ ಬಾಂಧವರು ಹಾಗೂ ನಮ್ಮ ಕುಡ್ಲ ಚಾನೆಲ್ ನ ಕರ್ಕೇರ ಸಹೋದರರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಅಕಾಡೆಮಿ ವತಿಯಿಂದ ನಡೆಯುತ್ತಿರುವ 7 ನೇ ವರ್ಷದ ಕಂಬಳ ತರಬೇತಿದಾರರಿಗೆ ಸಬ್ ಜೂನಿಯರ್ ವಿಭಾಗದ ಕೋಟಿ ಚೆನ್ನಯ ಜೋಡುಕರೆ ಪ್ರಾಯೋಗಿಕ ಕಂಬಳ ನಡೆಯಲಿದ್ದು ಸಚಿವರಾದ ಯು.ಟಿ.ಖಾದರ್,ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರ,ಸುನಿಲ್ ಕುಮಾರ್,ಬಿ.ರಮಾನಾಥ ರೈ,ಸಂಸದ ಬ್ರಿಜೇಶ್ ಚೌಟ,ಪುತ್ತೂರು ಶಾಸಕ ಅಶೋಕ್ ರೈ ಸಹಿತ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಕಾಡೆಮಿ ಸಂಚಾಲಕರಾದ ಕೆ.ಗುಣಪಾಲ ಕಡಂಬ ಅವರು ತಿಳಿಸಿದ್ದಾರೆ.












