ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡು ಬೂತ್ ಗಳ 66 ಮಂದಿ ಮುಸ್ಲಿಂ ಮತದಾರರ ಹೆಸರನ್ನು ತೆಗೆದುಹಾಕುವಂತೆ ಫಾರಂ- 7 ರಲ್ಲಿ ಅರ್ಜಿ ಸಲ್ಲಿಸಿರುವ ಬಿಜೆಪಿಯ ಬಿ.ಎಲ್.ಎ.ಗಳ ವಿರುದ್ಧ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ನೇರವಾಗಿ ಕಾವೂರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ರಾಷ್ಟ್ರದಲ್ಲಿ, ರಾಜ್ಯದಲ್ಲಿ ಎಸ್.ಐ.ಆರ್.ನಿಂದ ಏನೆಲ್ಲಾ ಗೊಂದಲಗಳು,ಸಮಸ್ಯೆಗಳಾಗುತ್ತಿದೆಯೆನ್ನುವುದು ತಮಗೆ ಗೊತ್ತಿದೆ, ಯಾರಿಗೂ ಅನ್ಯಾಯವಾಗಬಾರದು,ಇಲ್ಲಿ ವಾಸಿಸುವ ಇಲ್ಲಿಯವರಿಗೇ ಮತದಾನದ ಹಕ್ಕು ಸಿಗಬೇಕು,ಸರಕಾರದ ಸೌಲಭ್ಯಗಳು ಸಿಗಬೇಕು,ಕೇವಲ ಓಟಿನ ಉದ್ದೇಶದಿಂದ ಬಿಜೆಪಿಯವರು ಒಂದೇ ಧರ್ಮದವರನ್ನು ಟಾರ್ಗೆಟ್ ಮಾಡಿ ಮತದಾನದಿಂದ ವಂಚಿತರನ್ನಾಗುವಂತೆ ಪ್ರಯತ್ನ ಮಾಡುತ್ತಿದ್ದಾರೆ, ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ, ಯಾರೆಲ್ಲ ಫಾರಂ- 7 ನ್ನು ದುರ್ಬಳಕೆ ಮಾಡುತ್ತಿದ್ದಾರಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸ್ ಅಧಿಕಾರಿಯವರನ್ನು ಒತ್ತಾಯಿಸಿದ್ದಾರೆ.
ಬಿಜೆಪಿಯ ಬಿ.ಎಲ್.ಎ.ಗಳಾದ ಕಿಶನ್, ರಿತೇಶ್,ಯುವರಾಜ್ ಮತ್ತು ಶಕುಂತಲಾ ಅವರ ವಿರುದ್ಧ ದೂರು ನೀಡಿರುವ ಮಿಥುನ್ ರೈ ಅವರು ಇದರ ಹಿಂದೆ ಯಾರ್ಯಾರೆಲ್ಲಾ ಇದ್ದಾರೆಂದು ಪತ್ತೆಹಚ್ಚಿ ಅವರೆಲ್ಲರ ವಿರುದ್ಧ ಎಫ್.ಐ.ಆರ್.ದಾಖಲಿಸುವಂತೆ ಆಗ್ರಹಿಸಿದ್ದಾರೆ.












