ಶಿರ್ತಾಡಿ: ಮರಗಳ್ಳರ ವಿರುದ್ಧ ಎಫ್.ಐ.ಆರ್.

Picture of Namma Bedra

Namma Bedra

Bureau Report

ಶಿರ್ತಾಡಿ ಪರಿಸರದ ಸರಕಾರಿ ಸ್ಥಳದಿಂದ ಮರಗಳ್ಳತನ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಅರಣ್ಯ ಇಲಾಖಾಧಿಕಾರಿಗಳು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶಿರ್ತಾಡಿಯ ಧರ್ಮರಾಜ ಪೂವಣಿ ಹಾಗೂ ಪೂರ್ಣಚಂದ್ರ ಶೆಟ್ಟಿ ಈ ಪ್ರಕರಣದ ಆರೋಪಿಗಳು.
ದೈವಸ್ಥಾನವೊಂದರ ಹೆಸರಲ್ಲಿ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಸುದತ್ತ ಜೈನ್ ಶಿರ್ತಾಡಿ ಅವರು ಇತ್ತೀಚೆಗೆ ಆರೋಪಿಸಿದ್ದರು.
ಇವರ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಆರೋಪಿಗಳ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top