ಮೈಸೂರು ದಸರಾ: ಕೇಮಾರು ಶ್ರೀ ಸಹಿತ ಜಿಲ್ಲೆಯ ಸ್ವಾಮೀಜಿಗಳಿಗೆ ಆಹ್ವಾನ. ಈ ಆಹ್ವಾನ ಡಿ‌.ಕೆ.ಶಿ. ಮುಖ್ಯಮಂತ್ರಿಯಾದ ಬಳಿಕ !

Picture of Namma Bedra

Namma Bedra

Bureau Report

ಅ.11 ರಿಂದ ನಡೆಯಲಿರುವ ವಿಶ್ವಖ್ಯಾತಿಯ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಸಹಿತ ಜಿಲ್ಲೆಯ ಸ್ವಾಮೀಜಿಗಳನ್ನು ಆಹ್ವಾನಿಸಲಾಗಿದೆ.
ಈವರೆಗೆ ಮೈಸೂರು ದಸರಾ ಕಾರ್ಯಕ್ರಮಕ್ಕೆ ಜಿಲ್ಲೆಯ ಯಾವ ಸ್ವಾಮೀಜಿಯವರನ್ನೂ ಆಹ್ವಾನಿಸುತ್ತಿರಲಿಲ್ಲ.ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಎಲ್ಲ ಸ್ವಾಮೀಜಿಯವರಿಗೂ ಆಹ್ವಾನ ನೀಡಲಾಗಿದೆ.
ಮೈಸೂರು ತಹಶಿಲ್ದಾರ್ ಕಚೇರಿಯಿಂದ ಸ್ವಾಮೀಜಿಗಳಿಗೆ ಕರೆ ಬಂದಿದ್ದು ಮೈಸೂರಿಗೆ ಹೋಗಿ ಬರಲು,ಉಳಿದುಕೊಳ್ಳಲು ಸರ್ವ ರೀತಿಯ ವ್ಯವಸ್ಥೆ ಮಾಡಿ ಕೊಡಲಾಗುವುದೆಂದು ತಿಳಿಸಿ ಮಾಹಿತಿ ಪಡೆದುಕೊಂಡಿದ್ದಾರೆನ್ನಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top