ಇದೊಂದು ಡಿಫರೆಂಟಾದ ಪ್ರೇಮಕಥೆ. ಫ್ರೀ ಫೈರ್ ಆಟದಲ್ಲಿ ಪರಿಚಯವಾದ ಯುವಕನೊಬ್ಬನನ್ನು ಉತ್ತರಪ್ರದೇಶಕ್ಕೆ ಹುಡುಕಿಕೊಂಡು ಹೋಗಿ ಮದುವೆಯಾಗುವ ನಿರ್ಧಾರಕ್ಕೆ ಬಂದ ಕಥೆ.
ಆಕೆ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆಯವಳು.ಹೆಸರು ರಮ್ಯಾ. ಎಸ್ಸೆಸ್ಸೆಲ್ಸಿವರೆಗೆ ಓದಿ ಮನೆಯಲ್ಲೇ ಇದ್ದಳು.
ಆಕೆಗೆ ಮೊಬೈಲ್ ನಲ್ಲಿ ಫ್ರೀ ಫೈರ್ ಆಡುವ ಅಭ್ಯಾಸವಿದ್ದು ಆನ್ ಲೈನ್ ನಲ್ಲಿ ಆಡುವಾಗ ಉತ್ತರಪ್ರದೇಶ ಲಕ್ನೋದ ಅಮನ್ ವರ್ಮ ಎಂಬಾತನ ಪರಿಚಯವಾಗಿದೆ. ಕಳೆದೊಂದು ವರ್ಷದ ಇವರಿಬ್ಬರ ನಡುವಿನ ಗೆಳೆತನ ಪ್ರೇಮಕ್ಕೆ ತಿರುಗಿದೆ.
ಕಳೆದ ಆಗಸ್ಟ್ 29 ರಂದು ರಮ್ಯಾ ಮನೆಯಿಂದ ನಾಪತ್ತೆಯಾಗಿದ್ದು ಈಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗುತ್ತದೆ.
ಈಬಗ್ಗೆ ತನಿಖೆ ನಡೆಸಿದ ಮೂಡುಬಿದಿರೆ ಪೊಲೀಸರಿಗೆ ಆಕೆ ಲಕ್ನೋ ದಲ್ಲಿರುವುದು ಗೊತ್ತಾಗುತ್ತದೆ.ಅಲ್ಲಿಗೆ ಹೋದ ಪೊಲೀಸರಲ್ಲಿ ರಮ್ಯಾ ‘ ತಾನು ಪ್ರಾಯಪ್ರಬುದ್ಧಳಾಗಿದ್ದು ನನ್ನ ಸ್ವ ಇಚ್ಛೆಯಿಂದ ರೈಲಿನ ಮೂಲಕ ಲಕ್ನೋಗೆ ಬಂದಿದ್ದೇನೆ, ನಾನು ಮತ್ತು ಅಮನ್ ವರ್ಮಾ ಪರಸ್ಪರ ಪ್ರೀತಿಸುತ್ತಿದ್ದು ನಾವಿಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿರುವುದಾಗಿ’ ಹೇಳಿದ್ದಾಳೆಂದು ತಿಳಿದು ಬಂದಿದೆ.
ಮಕ್ಕಳ ಫ್ರೀಫೈರ್ ಆಟ ಈ ಹಂತಕ್ಕೂ ತಲುಪಿಸುತ್ತದೆಯೆನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.












