ಮೆಸ್ಕಾಂ ಎದುರು ವಿಲ್ಫ್ರೆಡ್ ಮೆಂಡೋನ್ಸ ನೇತೃತ್ವದಲ್ಲಿ ಟೆಲ್ಲಿಸ್ ನಗರ ಗ್ರಾಮಸ್ಥರ ಪ್ರತಿಭಟನೆ

Picture of Namma Bedra

Namma Bedra

Bureau Report

ಹೊಸಬೆಟ್ಟುವಿನ ಟೆಲ್ಲಿಸ್ ನಗರದ ವಿದ್ಯುತ್ ಟ್ರಾನ್ಸ್ಫಾರ್ಮರ್ ಗೆ ಕಳೆದ 34 ವರ್ಷಗಳಿಂದ ಬಳಕೆಯಲ್ಲಿರುವ ಹಳೆಯ ತಂತಿಗಳನ್ನು ಬದಲಾಯಿಸುವಂತೆ ಆಗ್ರಹಿಸಿ ಹೊಸಬೆಟ್ಟು ಗ್ರಾ.ಪಂ.ಮಾಜಿ ಸದಸ್ಯ ವಿಲ್ಫ್ರೆಡ್ ಮೆಂಡೋನ್ಸ ಅವರ ನೇತೃತ್ವದಲ್ಲಿ ಟೆಲ್ಲಿಸ್ ನಗರದ ಗ್ರಾಮಸ್ಥರು ಮೆಸ್ಕಾಂ ಕಚೇರಿಯೆದುರು ಶಾಂತಿಯುತ ಪ್ರತಿಭಟನೆ ನಡೆಸಿದರು.
ಕಳೆದ 34 ವರ್ಷಗಳಿಂದ ಹಳೆಯ ತಂತಿಗಳೇ ಬಳಕೆಯಲ್ಲಿದ್ದು ಇದು ಭಾರೀ ಅಪಾಯಕಾರಿಯಾಗಿದೆ, ಇದನ್ನು ಸರಿಪಡಿಸಿ ಹೊಸ ತಂತಿಗಳನ್ನು ಅಳವಡಿಸಬೇಕೆಂದು ವಿಲ್ಫ್ರೆಡ್ ಮೆಂಡೋನ್ಸ ಆಗ್ರಹಿಸಿದರು.


ಈ ಸಂದರ್ಭದಲ್ಲಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಮೆಸ್ಕಾಂ ಅಧಿಕಾರಿಗಳು ‘ ಹದಿನೈದು ದಿನಗಳೊಳಗೆ ಕಾಮಗಾರಿ ಪ್ರಾರಂಭಿಸುವುದಾ’ಗಿ ಭರವಸೆ ನೀಡಿದ್ದು ನಿಗದಿತ ಅವಧಿಯಲ್ಲಿ ಕಾಮಗಾರಿ ಪ್ರಾರಂಭಿಸದಿದ್ದರೆ ಮತ್ತೆ ಪ್ರತಿಭಟಿಸುವುದಾಗಿ ಟೆಲ್ಲಿಸ್ ನಗರ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಹೊಸಬೆಟ್ಟು ಕೆಥೊಲಿಕ್ ಸಭಾ ಅಧ್ಯಕ್ಷ ಸೆಲ್ವಿನ್ ಜೂಡ್ ಕುಲಾಸೋ ಸಹಿತ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top