ಪುತ್ತಿಗೆ ಗ್ರಾಮದ ಪೊಯ್ಯಾಡಿ ಹಾಗೂ ಗುಂಡ್ಯಡ್ಕದ ಶ್ರೀನಿವಾಸಪುರದಲ್ಲಿ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದೆ.
ಪುತ್ತಿಗೆ ಗ್ರಾಮದ ಪೊಯ್ಯಾಡಿ ಎಂಬಲ್ಲಿ ರಾಧಾ ನಾಯ್ಕ್ ಅವರ ಮನೆಗೆ ಕಳೆದ ರಾತ್ರಿ ಸಿಡಿಲು ಬಡಿದು ವಿದ್ಯುತ್ ಮೀಟರ್,ಉಪಕರಣಗಳಿಗೆ ಹಾನಿಯಾದರೆ ಮನೆಯ ನಾಲ್ಕು ಸಿಮೆಂಟ್ ಶೀಟ್ ಗಳು ಹಾರಿಹೋಗಿ ಪುಡಿಯಾಗಿದೆ.

ಗುಂಡ್ಯಡ್ಕದ ಶ್ರೀರಾಮಪುರದ ಶೇಖರ ಪೂಜಾರಿಯವರ ಮನೆಗೂ ಹಾನಿಯಾಗಿದೆ.
ಅಕ್ರಮ ಸಕ್ರಮ ಸಮಿತಿಯ ಸದಸ್ಯ ಮಿತ್ತಬೈಲು ವಾಸುದೇವ ನಾಯಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.












