ನಾಳೆ ಮೂಡುಬಿದಿರೆಯಲ್ಲಿ ಸುಗಮ ಸಂಚಾರ ಸುವ್ಯವಸ್ಥೆಯ ಕುರಿತು ಸಭೆ

Picture of Namma Bedra

Namma Bedra

Bureau Report

ಮಂಗಳೂರು ನಗರ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖಾಧಿಕಾರಿಯವರ ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿ ಸುಗಮ ಸಂಚಾರ ಸುವ್ಯವಸ್ಥೆಯ ಕುರಿತು ಸಭೆಯು ನಾಳೆ ಬೆಳಿಗ್ಗೆ (ನ.3)10-30 ಕ್ಕೆ ಸಮಾಜ ಮಂದಿರದಲ್ಲಿ ನಡೆಯಲಿದೆ.
ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು,ರಸ್ತೆ ಸುರಕ್ಷತೆ ಕಾಪಾಡುವುದು ಹಾಗೂ ಸಂಚಾರ ನಿಯಮಗಳ ಪಾಲನೆ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಶಾಲಾ ವಾಹನಗಳ ಆಡಳಿತ ಮಂಡಳಿಯವರು,ಚಾಲಕರು,ಖಾಸಗಿ ಬಸ್ಸುಗಳ ಮಾಲಕರು,ಚಾಲಕರು,ರಿಕ್ಷಾ ಚಾಲಕ ಮಾಲಕರು ಈ ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುವಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top