‘ನೆರಳು’ ಸೇವಾ ಸಂಸ್ಥೆ. ಇದು ಅಶಕ್ತರಿಗೆ, ಬಡರೋಗಿಗಳಿಗೆ,ಬಡವಿದ್ಯಾರ್ಥಿಗಳಿಗೆ ನೆರವಾಗಲು ಉಂಟಾದ ಸೇವಾ ಸಂಸ್ಥೆ.
‘ಒಂದು ಮಗುವಿಗೆ ಶಿಕ್ಷಣ ನೀಡುವುದೆಂದರೆ ಕೇವಲ ಅಕ್ಷರ ಕಲಿಸುವುದಲ್ಲ, ಆ ಮಗುವಿನ ಕನಸುಗಳಿಗೆ ರೆಕ್ಕೆಗಳನ್ನು ನೀಡುವಂತಹ ಪ್ರೋತ್ಸಾಹ ನೀಡಬೇಕು. ಅದೇರೀತಿ ಸಂಕಷ್ಟದಲ್ಲಿರುವ ಬಡವರಿಗೆ, ಅನಾರೋಗ್ಯ ಪೀಡಿತರಿಗೆ ನೆರವಾಗುವುದೆಂದರೆ ಅವರ ಬದುಕಿನಲ್ಲಿ ಹೊಸ ಭರವಸೆಯ ಬೆಳಕನ್ನು ಮೂಡಿಸಿದಂತೆ’ ಎನ್ನುವ ಧ್ಯೇಯದಡಿ ಈ ನೆರಳು ಸಂಸ್ಥೆ ಒಂದು ಲಕ್ಕಿಡಿಪ್ ಯೋಜನೆಯನ್ನು ಹಮ್ಮಿಕೊಂಡಿದೆ.
ಕಟ್ಟಬೇಕಾದದ್ದು ಕೇವಲ 300 ರೂ. ಅದಕ್ಕೂ ದೊಡ್ಡ ಮೊತ್ತದ ಬಹುಮಾನ ನೀಡಿದ್ದಾರೆ. ಅದೃಷ್ಟ ಇದ್ದವರಿಗೆ ಈ ಬಹುಮಾನ ಸಿಗುತ್ತದೆ.
ಪ್ರಥಮ ಬಹುಮಾನ ಒಂದು ಲಕ್ಷ ರೂ., ದ್ವಿತೀಯ ಬಹುಮಾನ 25 ಸಾವಿರ ರೂ.( ಇಬ್ಬರಿಗೆ) ತೃತೀಯ ಬಹುಮಾನ ಚಿನ್ನದ ನಾಣ್ಯ ( ಐದು ಮಂದಿಗೆ), ಚತುರ್ಥ ಬಹುಮಾನ ಹತ್ತು ಸಾವಿರ ರೂ.( ಐದು ಮಂದಿಗೆ) ಹಾಗೂ ಪಂಚಮ ಬಹುಮಾನ ಲ್ಯಾಪ್ ಟಾಪ್ ( ಇಬ್ಬರಿಗೆ).
ಇದರಲ್ಲಿ ಉಳಿದ ಹಣವನ್ನು ಆರ್ಥಿಕ ನೆರವಿಗಾಗಿ ಉಪಯೋಗಿಸುವ ಯೋಜನೆ ನೆರಳು ಸಂಸ್ಥೆಯದು.
ಮುನ್ನೂರು ರೂ.ಕೊಟ್ಟು ಲಕ್ಕಿಡಿಪ್ ಪಡೆದು ಬಹುಮಾನ ಸಿಗದವರು ಅಸಮಾಧಾನ ಪಡಬೇಕಿಲ್ಲ,ಯಾಕೆಂದರೆ ಆ ಹಣವು ಬಡ ವಿದ್ಯಾರ್ಥಿಗಳಿಗೆ, ಅಶಕ್ತರಿಗೆ ಅಥವಾ ಅನಾರೋಗ್ಯ ಪೀಡಿತರಿಗೆ ನೆರವಾಗುತ್ತದೆ.
ಇಂದಿನ ಸಮಾಜದಲ್ಲಿ ಅನೇಕ ಬಡ ಮಕ್ಕಳು ಆರ್ಥಿಕ ಸಂಕಷ್ಟದಿಂದ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗದೆ ತಮ್ಮ ಕನಸುಗಳನ್ನು ಅರ್ಧದಲ್ಲೇ ಬಿಟ್ಟು ಬಿಡುತ್ತಾರೆ.ಮತ್ತೊಂದೆಡೆ ಆರ್ಥಿಕವಾಗಿ ಹಿಂದುಳಿದ ಅನೇಕ ಕುಟುಂಬಗಳು ಹಣದ ಕೊರತೆಯಿಂದ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದಾರೆ.
ಇಂತವರ ಪಾಲಿಗೆ ನೆರಳಾಗಲು ನೆರಳು ಸಂಸ್ಥೆ ಈ ಯೋಜನೆಯನ್ನು ಹಾಕಿಕೊಂಡಿದ್ದು ಇವರ ಈ ಮಾನವೀಯ ಕಳಕಳಿಯ ಯೋಜನೆಗೆ ಎಲ್ಲರೂ ಕೈಜೋಡಿಸಿದರೆ ಅಸಹಾಯಕರಿಗೆ ಸಹಾಯವಾಗುತ್ತದೆ.



