ಪೆರಾಡಿ ಊರಿನಲ್ಲಿಂದು ಹಬ್ಬದ ವಾತಾವರಣ. ಇಡೀದಿನ ವಿವಿಧ ಕಾರ್ಯಕ್ರಮಗಳ ಮೂಲಕ ಭರ್ಜರಿ ಗಮ್ಮತ್. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಪೆರಾಡಿ ಸುತ್ತಮುತ್ತಲೂರಿನ ಜನರು ತಯಾರಾಗಿ ಬಂದಿದ್ದಾರೆ,ಬರುತ್ತಿದ್ದಾರೆ.
ಪೆರಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕಿಂದು 75 ರ ಸಂಭ್ರಮ- ಪೆರಾಡಿ ಊರಿಗೂ ಸಂಭ್ರಮ.ಬೆಳಿಗ್ಗೆ ಹೈಸ್ಕೂಲ್ ಬಳಿಯಿಂದ ಆಕರ್ಷಕ ಸ್ತಬ್ಧಚಿತ್ರಗಳ ಆಕರ್ಷಕ ಮೆರವಣಿಗೆ.10 ಗಂಟೆಗೆ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ‘ ಸಂಗಮ’ ದ ಉದ್ಘಾಟನೆ. ಸುಮಾರು ಮೂರೂವರೆ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಂದರ ಕಟ್ಟಡದ ಲೋಕಾರ್ಪಣೆ.
ಮಧ್ಯಾಹ್ನ ಊಟ.ಸಂಜೆ ಸಂಗೀತ, ಜಾದೂ ಮತ್ತು ರಾತ್ರಿ ದೇವದಾಸ್ ಕಾಪಿಕಾಡ್ ತಂಡದ ‘ಯಾನೊರಿ ಬರೊಲಿಯಾ’ ನಾಟಕ.
ಹೀಗೆ ಇಡೀದಿನದ ಕಾರ್ಯಕ್ರಮಕ್ಕೆ ಪೆರಾಡಿ ಸೊಸೈಟಿ ಸಿದ್ದವಾಗಿದೆ.ಅಧ್ಯಕ್ಷರು, ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದ ಯಶಸ್ಸಿಗೆ ಹಲವು ದಿನಗಳಿಂದ ಶ್ರಮಿಸಿದ್ದಾರೆ.
ಇದು ಈ ಭಾಗದಲ್ಲಿ ನಡೆಯುವ ಅತಿದೊಡ್ಡ ಕಾರ್ಯಕ್ರಮ.
ಯಾರು ಕೂಡಾ ‘ಯಾನೊರಿ ಬರೊಲಿಯಾ’ ಅಂತ ಕೇಳಬೇಡಿ.ನಮ್ಮದೇ ಕಾರ್ಯಕ್ರಮವೆಂದು ಹೊರಟುಬನ್ನಿ!



