ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕೊಡಂಗಲ್ಲು ಮಾರಪ್ಪಣ್ಣನ ತೋಟದ ಪಕ್ಕದಲ್ಲಿರುವ ಸಾರ್ವಜನಿಕ ರಸ್ತೆಯ ಕಾಂಕ್ರೀಟ್ ಚರಂಡಿಯನ್ನು ಪ್ರಭಾವಿ ವ್ಯಕ್ತಿಯೋರ್ವರು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಚರಂಡಿ ಮುಚ್ಚಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಂಗಲ್ಲು ನಿವಾಸಿಗಳು ಮೂಡುಬಿದಿರೆ ಪುರಸಭೆಗೆ ದೂರು ನೀಡಿದ್ದಾರೆ.
ಪುರಸಭಾ ಮಾಜಿ ಸದಸ್ಯೆ ರೂಪಾ ಎಸ್.ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಮುಖ್ಯಾಧಿಕಾರಿ ಇಂದು ಎಮ್.ಅವರಲ್ಲಿ ದೂರು ನೀಡಿದ್ದು ಚರಂಡಿ ಮುಚ್ಚಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಚರಂಡಿಯನ್ನು ಮೊದಲಿನಂತೆಯೇ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಆಗ್ರಹಿಸಿದ್ದಾರೆ.



