ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಎಂ.ಎ.ಎಸ್. ಆಸಿಫ್ ಜೆಡಿಎಸ್ ಅಭ್ಯರ್ಥಿ

Picture of Namma Bedra

Namma Bedra

Bureau Report

ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗೆ ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಜೆಡಿಎಸ್ ಮುಖಂಡ ತೋಡಾರಿನ ಎಂ.ಎ.ಎಸ್.ಆಸಿಫ್ ಇಕ್ಬಾಲ್ ಅವರು ಸ್ಪರ್ಧಿಸುವುದು ಖಚಿತವೆಂದು ತಿಳಿದು ಬಂದಿದೆ.
ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರೂ ಆಗಿರುವ ಆಸಿಫ್ ಅವರು ಯುವ ಮುಖಂಡರಾಗಿದ್ದು ಕಳೆದ ಕೆಲ ವರ್ಷಗಳಿಂದ ಜೆಡಿಎಸ್ ನಲ್ಲಿ ಸಕ್ರಿಯರಾಗಿದ್ದಾರೆ.
ಸರ್ವರೊಂದಿಗೂ ಆತ್ಮೀಯರಾಗಿ ,ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಈಬಾರಿ ಅನುಕೂಲಕರ ಮೀಸಲಾತಿ ಪ್ರಕಟಗೊಂಡಿರುವುದರಿಂದ ಅವರು ಸ್ಪರ್ಧಿಸುವುದು ಖಚಿತವೆಂದು ತಿಳಿದು ಬಂದಿದೆ.
ತಾಲೂಕು ಪಂಚಾಯತ್ ಮಾಜಿ ಸದಸ್ಯರಾಗಿ, ಜೆಡಿಎಸ್ ಮುಖಂಡರಾಗಿ ಮಾಜಿ ಸಚಿವ ದಿ.ಅಮರನಾಥ ಶೆಟ್ಟರೊಂದಿಗಿದ್ದು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದ ದಿ.ಎಂ.ಎ.ಎಸ್.ಅಬೂಬಕ್ಕರ್ ಅವರ ಪುತ್ರರಾಗಿರುವ ಆಸಿಫ್ ಅವರಿಗೆ ಅಪಾರವಾದ ಜನಬೆಂಬಲವಿದ್ದು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.ಅವರ ಸ್ಪರ್ಧೆಗೆ ಜೆಡಿಎಸ್ ನಾಯಕಿ, ಅಮರನಾಥ ಶೆಟ್ಟರ ಪುತ್ರಿ ಡಾ.ಅಮರಶ್ರೀ ಶೆಟ್ಟಿ ಅವರು ಬೆಂಬಲ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top