ದ.ಕ.ಜಿ.ಪಂಹಿ.ಪ್ರಾ.ಶಾಲೆ ವರ್ಣಬೆಟ್ಟು ಪಾಲಡ್ಕ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾಷಿಕೋತ್ಸವವು ಶಾಲಾ ವಠಾರದಲ್ಲಿ ವಿಜೃಂಭಣೆಯಿಂದ ನಿನ್ನೆ ಜರುಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಮ್‌ಸಿ ಅಧ್ಯಕ್ಷರಾದ ರಾಜೆಶ್ ಪೂಜಾರಿ ಕೆಂಜ ಅವರು ವಹಿಸಿದ್ದರು.
ಮುಖ್ಯ ಶಿಕ್ಷಕಿ ಮೇಬಲ್ ಡಿ’ಸೊಜಾ ಅವರು ಈ ವರ್ಷದ ಶಾಲಾ ವರದಿ ವಾಚಿಸಿದರು.
ನಂತರ ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಶಾಲಾ ಮತ್ತು ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮತ್ತು ಕಲಿಕೆಯಲ್ಲಿ ಮುಂದಿರುವ ಮಕ್ಕಳಿಗೆ ಹೊಸಬೆಳಕು ಸಮಾಜ ಸೇವಾ ಬಳಗ, ಕೆಪುಲಾಜೆ ಘಟಕದ ವತಿಯಿಂದ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಶಾಲಾ ಹಳೆ ವಿದ್ಯಾರ್ಥಿ ರವಿಪ್ರಸಾದ್, ಹಳೆ ವಿದ್ಯಾರ್ಥಿ ಸಂಘದ ಪೂರ್ವಾಧ್ಯಕ್ಷ ಸುಭಾಶ್ ನಾಯ್ಕ್ ಅಲಿಮಾರ್, ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕೆ.ಎಮ್.ಎಫ್. ಅಧ್ಯಕ್ಷ ಕೆ. ಪಿ. ಸುಚರಿತ ಶೆಟ್ಟಿ ಅವರು ಮಾತನಾಡಿ ಕನ್ನಡ ಮಾಧ್ಯಮ ಶಾಲೆಯ ಪ್ರಾಮುಖ್ಯತೆಯನ್ನು ಪೋಷಕರಿಗೆ ತಿಳಿ ಹೇಳಿದರು. ಶಾಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿದರು.
ಬಳಿಕ ಮಾತನಾಡಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಪಾಲಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪೂಜಾರಿ ಅವರು ಕನ್ನಡ ಮಾಧ್ಯಮ ಶಾಲೆಯನ್ನು ತಾತ್ಸಾರ ಮಾಡಬಾರದು, ಕನ್ನಡ ಮಾದ್ಯಮದಲ್ಲಿಯೇ ಕಲಿತು ಸಾಧನೆ ಮಾಡಿ ಸನ್ಮಾನಿಸಲ್ಪಟ್ಟ ತಮ್ಮ ಶಾಲಾ ಹಳೆ ವಿದ್ಯಾರ್ಥಿಗಳ ಬಗ್ಗೆ ಪೋಷಕರಿಗೆ ವಿವರಿಸಿ ಹೇಳಿದರು ಮತ್ತು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪೋಷಕರಿಗೆ ಧನ್ಯವಾದ ಸಲ್ಲಿಸಿದರು. ಈ ವಾರ್ಷಿಕೋತ್ಸವಕ್ಕೆ ಹಲವು ದಿನಗಳಿಂದ ಶ್ರಮಿಸಿದ ಸರ್ವಸದಸ್ಯರಿಗೆ, ಸಹಕರಿಸಿದ ಶಿಕ್ಷಕ ವೃಂದಕ್ಕೆ ಹಾಗೂ ತನು ಮನ ಧನದಿಂದ ಸಹಕರಿಸಿದ ಊರ ಎಲ್ಲಾ ಶಾಲಾಭಿಮಾನಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಿದರು.
ಎಸ್.ಡಿ.ಎಮ್.ಸಿ. ಮಾಜಿ ಅಧ್ಯಕ್ಷ ಪಧ್ಮನಾಭ ಎಸ್. ಅಮೀನ್, ಪಾಲಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ, ಪ್ರಸ್ತುತ ಸದಸ್ಯರಾದ ಸವಿತಾ ಪೂಜಾರಿ, ಪಾಲಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಸುಧೀರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ಗಣೆಶ್ ಶೆಟ್ಟಿ, ಜೇಸಿಐ ಮುಂಡ್ಕೂರು ಭಾರ್ಗವ ಇದರ ಅಧ್ಯಕ್ಷ, ಗ್ಯಾರಂಟಿ ಯೋಜನಾ ಸಮಿತಿ ಮೂಡುಬಿದಿರೆ ತಾಲೂಕು ಇದರ ಸದಸ್ಯರಾದ ಗಣೇಶ್ ಆಚಾರ್ಯ, ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಸುಶ್ಮಾ, ಪ್ರಜ್ಷಲ್, ಶಾಲಾ ನಾಯಕಿ ಶ್ರಾವ್ಯ, ಈ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.

ಶಿಕ್ಷಕ ಸುಧಾಕರ ಕೇಮಾರ್ ಕಾರ್ಯಕ್ರಮ ನಿರೂಪಿಸಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಶ್ಮಾ ಧನ್ಯವಾದ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗು ಹಳೆವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿತು. ನಂತರ ಶಾಲಾ ಮಕ್ಕಳಿಂದ ‘ಅಕ್ಕ’ ತುಳು ಸಾಂಸಾರಿಕ ನಾಟಕ ಹಾಗೂ ತುಳುವ ಸಿರಿ ಕಲಾವಿದೆರ್ ನಂದಳಿಕೆ ಇವರಿಂದ ‘ಕೈತಲ್ ಪೋವೊಡ್ಚಿ’ ಹಾಸ್ಯಮಯ ನಾಟಕ ನಡೆಯಿತು.