Latest News

ನಾಳೆ ಉದ್ಘಾಟನೆಗೊಳ್ಳಲಿದೆ ಸಂಪಿಗೆ ರೆಸಾರ್ಟ್. *ಡಾ.ಮೋಹನ ಆಳ್ವರಿಂದ ಉದ್ಘಾಟನೆ

Picture of Namma Bedra

Namma Bedra

Bureau Report

ಮೂಡುಬಿದಿರೆ ಸಮೀಪದ ಸಂಪಿಗೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಸಂಪಿಗೆ ರೆಸಾರ್ಟ್’ ನಾಳೆ ಬೆಳಿಗ್ಗೆ 10-30ಕ್ಕೆ ಉದ್ಘಾಟನೆಗೊಳ್ಳಲಿದ್ದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಉದ್ಘಾಟಿಸಲಿದ್ದಾರೆ.


ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಹಾಗೂ ಕೆ.ಅಭಯಚಂದ್ರ, ಕಾಂಗ್ರೆಸ್ ಮುಖಂಡ ಮಿಥುನ್ ರೈ,ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಚೌಟರ ಅರಮನೆಯ ಕುಲದೀಪ್ ಎಂ,ಉದ್ಯಮಿ ಗಳಾದ ತಿಮ್ಮಯ್ಯ ಶೆಟ್ಟಿ, ಕೆ.ಶ್ರೀಪತಿ ಭಟ್,ಎಂ.ಶ್ರೀಧರ ಆಚಾರ್ಯ, ನಾರಾಯಣ ಪಿ.ಎಂ, ಜಯಶ್ರೀ ಅಮರನಾಥ ಶೆಟ್ಟಿ, ರಾಮಚಂದ್ರ ಆಳ್ವ, ಪುರುಷೋತ್ತಮ ಶೆಟ್ಟಿ ಹೊಸಮನೆಗುತ್ತು,ರವೀಂದ್ರ ಎಸ್.ಶೆಟ್ಟಿ ಸಾಯಿ ಪ್ಯಾಲೆಸ್, ಗಜಾನನ ಎನ್.ಪೂಂಜ,ಪುರುಷೋತ್ತಮ ಶೆಟ್ಟಿ ಉಡುಪಿ ಮೊದಪಾದ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಮೂಲತಃ ಮೂಡುಬಿದಿರೆ ಮಾರೂರಿನವರಾಗಿರುವ ಪುಣೆಯ ಅತಿಥಿ & ಕ್ವಾಲಿಟಿ ಗ್ರೂಪ್ ಆಫ್ ರೆಸ್ಟೋರೆಂಟ್ಸ್ ನ ಪ್ರವೀಣ್ ಶೆಟ್ಟಿ ಅವರ ಪರಿಕಲ್ಪನೆಯಲ್ಲಿ ಈ ರೆಸಾರ್ಟ್ ನಿರ್ಮಾಣವಾಗಿದೆ.ಅವರು ಪುಣೆ ಮತ್ತು ಯುಎಇಯಲ್ಲಿ ರೆಸ್ಟೋರೆಂಟ್ ಗಳ ಸರಣಿಯನ್ನು ಹೊಂದಿದ್ದಾರೆ.ಹೊರನಾಡ ಕನ್ನಡ ರತ್ನ ಮತ್ತು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಡಾ.ಸುಧಾಕರ ಶೆಟ್ಟಿಯವರ ಸಹೋದರ.


ಡಾ.ಸುಧಾಕರ ಶೆಟ್ಟಿ ಅವರು ಸತತ ನಾಲ್ಕು ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಆವಾರ್ಡ್ ಪುರಸ್ಕೃತರು. ಪುಣೆಯ ವೈದ್ಯಕೀಯ ತಂಡದ ಸದಸ್ಯರಾಗಿದ್ದು ಕಳೆದ 36 ವರ್ಷಗಳಿಂದ ಪುಣೆಯ ಬೇಬಿ ಫ್ರೆಂಡ್ ಕ್ಲಿನಿಕ್ ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇತ್ತೀಚೆಗೆ ಅವರಿಗೆ ‘ತುಳುನಾಡ ಧನ್ವಂತರಿ’ ಎಂಬ ಪ್ರತಿಷ್ಠಿತ ಬಿರುದು ಕೂಡಾ ಲಭಿಸಿದೆ.


ರೆಸಾರ್ಟ್ ವಿಶೇಷತೆಗಳು:
ಸಂಪಿಗೆ ರೆಸಾರ್ಟ್ SAPPHIRE- ಬ್ಯಾಂಕ್ವೆಟ್ ಹಾಲ್,ಪೋಲಾರಿನ್-ದ ಲಾಂಜ್,ಕ್ವಾಲಿಟಿ ರೆಸ್ಟೋರೆಂಟ್,SPA ಮತ್ತು ಜಿಮ್,ಮಕ್ಕಳ ಆಟದ ಪ್ರದೇಶ,ಪೂಲ್ ಸೈಡ್ ವಿಲ್ಲಾಗಳು,ಕಾರ್ಯನಿರ್ವಾಹಕ|ಡಿಲಕ್ಸ್ ಕೊಠಡಿಗಳು ಮತ್ತು ಸೂಟ್ ಗಳನ್ನು ಹೊಂದಿದೆ.
19-12-2024 ರಿಂದ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು ಅತಿಥಿ ಮತ್ತು ಕ್ವಾಲಿಟಿ ರೆಸ್ಟೋರೆಂಟ್ ನ ಹರಿಪ್ರಸಾದ್ ಶೆಟ್ಟಿ ಅವರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು