ಮೂಡುಬಿದಿರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅನೀಶ್ ಡಿಸೋಜ ಅವರು ಆಯ್ಕೆಯಾಗಿದ್ದಾರೆ.
ಕೆಲ ತಿಂಗಳ ಹಿಂದೆ ಆನ್ಲೈನ್ ಮೂಲಕ ರಾಜ್ಯದಾದ್ಯಂತ ಯುವ ಕಾಂಗ್ರೆಸ್ ನ ಚುನಾವಣೆ ನಡೆದಿದ್ದು ಮೂಡುಬಿದಿರೆ ಬ್ಲಾಕ್ ನಿಂದ ಅನೀಶ್ ಅವರು ಸ್ಪರ್ಧಿಸಿದ್ದರು.
ಇದೀಗ ಫಲಿತಾಂಶ ಹೊರಬಂದಿದ್ದು ಮೂಡುಬಿದಿರೆ ಬ್ಲಾಕ್ ಯುವ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಅನೀಶ್ ಅವರು ಆಯ್ಕೆಯಾಗಿದ್ದಾರೆ.
ಅನೀಶ್ ಅವರು ಬೆಳುವಾಯಿ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.
