ಬೆದ್ರ ಮಾರ್ಕೆಟ್ ಒಳಗಡೆ ಕಳೆದ ಕಳೆದ ರಾತ್ರಿಯೊಂದು ಕಾಂಪ್ಲಿಕೇಷನ್ ನಡೆದಿದೆ.ಅದು ಎರಡು ‘ಬೊಂಡ’ ಗಳ ಕಾಂಪ್ಲಿಕೇಷನ್.
ಮಾರ್ಕೆಟ್ ನಲ್ಲಿ ಕಳೆದ ಹಲವು ವರ್ಷಗಳಿಂದ ದಿನೇಶ್ ಎಂಬವರು ಬೊಂಡ ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ದಿನಕ್ಕೆ ಇಂತಿಷ್ಟು ಅಂತ ಬಾಡಿಗೆಯನ್ನು ಸುಂಕವಸೂಲಿ ಗುತ್ತಿಗೆದಾರರಿಗೆ ನೀಡುತ್ತಿದ್ದರು.
ಇತ್ತೀಚೆಗೆ ಮಾರ್ಕೆಟ್ ನ ಸುಂಕ ವಸೂಲಿ ಗುತ್ತಿಗೆ ಬೇರೊಬ್ಬರ ಪಾಲಾಗಿದೆ.ಹೊಸ ಗುತ್ತಿಗೆದಾರರು ಹೆಚ್ಚು ಸುಂಕ ನೀಡಬೇಕೆಂದು ಒತ್ತಾಯಿಸಿದ್ದಾರೆನ್ನಲಾಗಿದೆ.ಆದರೆ ‘ ನನ್ನಿಂದ ಸಾಧ್ಯವಿಲ್ಲ, ನಾನು ಅಷ್ಟೇ ಕೊಡುವು’ದಾಗಿ ದನೇಶ್ ಹೇಳಿದ್ದಾರೆನ್ನಲಾಗಿದೆ.ಆದರೂ ಹೊಸ ಗುತ್ತಿಗೆದಾರರು ಹೆಚ್ಚುವರಿ ಕೊಡಬೇಕೆಂದು ಒತ್ತಾಯಿಸಿರುವ ಬಗ್ಗೆ ಮಾಜಿ ಸಚಿವ ಅಭಯಚಂದ್ರ ಅವರಲ್ಲಿ ದೂರು ನೀಡಿದ್ದರು.

ಆದರೆ ಕಳೆದ ರಾತ್ರಿ ದಿನೇಶ್ ಅವರ ಬೊಂಡದಂಗಡಿ ಪಕ್ಕದಲ್ಲೇ ಇನ್ನೊಂದು ಬೊಂಡದಂಗಡಿ ದಿಢೀರ್ ಓಪನ್ ಆಗಿದೆ.ಅಲ್ಲದೆ ದಿನೇಶ್ ಅವರ ಅಂಗಡಿಯ ಬೊಂಡಗಳನ್ನು ಎಸೆಯಲಾಗಿತ್ತೆಂದೂ ಹೇಳಲಾಗುತ್ತಿದೆ.
ಮಾರ್ಕೆಟ್ ನ ಗೂಂಡಾಗಿರಿ ವಿರುದ್ಧ ಅಭಯಚಂದ್ರ ಅವರು ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದ್ದರು. ರಾತ್ರಿ ನಡೆದ ಈ ಕೃತ್ಯದಿಂದ ಮತ್ತೆ ಕೋಪಗೊಂಡ ಅವರು ಬೆಳಿಗ್ಗೆ ಖುದ್ದಾಗಿ ಮಾರ್ಕೆಟ್ ಗೆ ತೆರಳಿ ಪುರಸಭಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪುರಸಭಾಧಿಕಾರಿಗಳು,ಪೊಲೀಸರು ಸ್ಥಳಕ್ಕೆ ಬಂದಿದ್ದು ರಾತ್ರಿ ಹಾಕಿದ್ದ ಅಂಗಡಿಯನ್ನು ತೆರವುಗೊಳಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಪುರಸಭಾ ಸಿಬ್ಬಂದಿಗಳು ಆ ಅನಧಿಕೃತ ಅಂಗಡಿಯನ್ನು ತೆರವುಗೊಳಿಸಿದ್ದಾರೆ.
ಬಡ ವ್ಯಾಪಾರಿಯೋರ್ವರ ಸಹಾಯಕ್ಕೆ ಧಾವಿಸಿ ನ್ಯಾಯ ಒದಗಿಸಿಕೊಡುವಲ್ಲಿ ಮಾಜಿ ಸಚಿವ ಅಭಯಚಂದ್ರ ಅವರು ಯಶಸ್ವಿಯಾಗಿದ್ದಾರೆ.
ಅಲ್ಲದೆ ಹಳೆ ಮಾರ್ಕೆಟ್ ನಿಂದ ಸ್ವರಾಜ್ಯ ಮೈದಾನಕ್ಕೆ ಶಿಫ್ಟ್ ಆಗುವಾಗ 68 ಅಂಗಡಿಗಳಿದ್ದು ಅಷ್ಟೇ ಅಂಗಡಿಗಳಿರಬೇಕು, ಬೇರೆ ಅಂಗಡಿಗಳಿಗೆ ಅವಕಾಶ ನೀಡಬಾರದೆಂದೂ ಪುರಸಭಾಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದ್ದಾರೆ.