ಯಾರ್ಯಾರ ಹಣೆ ಬರಹದಲ್ಲಿ ಏನೇನು ಬರೆದಿದೆಯಾ…. ಅದು ಆಗಲೇಬೇಕು. ಮೋಸ್ಟ್ಲಿ ಈ ಇಬ್ಬರು ಬಯ್ಯನವರ ಹಣೆಯಲ್ಲಿ ಈದಿನ ಪೊಲೀಸರಿಂದ ಪೆಟ್ಟು ತಿನ್ನಲೇಬೇಕೆಂದು ಬರೆದಿರಬೇಕು.
ಅಲ್ಲ, ಕೆಲಸ ಮುಗಿಸಿ ನೆಟ್ಟಗೆ ಮನೆಸೇರುವ ಬದಲು ಈ ಬಯ್ಯನವರ ಈರೀತಿಯ ಅಧಿಕ್ಕ ಪ್ರಸಂಗ ಬೇಕಿತ್ತಾ?
ಇನ್ಸ್ಪೆಕ್ಟರ್ ಸಂದೇಶ್ ಅವರು ಮೂಡುಬಿದಿರೆಯಲ್ಲಿರುವುದು ಅವರಿಗೆ ಗೊತ್ತಿರಲಿಕ್ಕಿಲ್ಲ, ಹಾಗಾಗಿಯೇ ಈ ಕೃತ್ಯವನ್ನೆಸಗಿದ್ದಾರೆ.
ಪಾಪ, ಸಂದೇಶ್ ಅಂದರೆ ಯಾರು ಅಂತ ಅವರಿಬ್ಬರಿಗೆ ಇವತ್ತೇ ಚೆನ್ನಾಗಿ ಪರಿಚಯವಾಗಿರಬೇಕು!

ವಿಷಯ ಎಲ್ಯ.ಆದರೆ ಅವರಿಬ್ಬರು ಸಿಸಿ ಕೆಮರಾದಲ್ಲಿ ಸೆರೆಯಾಗದಿರುತ್ತಿದ್ದರೆ ಮಲ್ಲ ಸಂಗತಿ ಆಗುತ್ತಿತ್ತು.ಆದರೆ ಹಾಗಾಗದಂತೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಹಾಗೂ ಮೂಡುಬಿದಿರೆ ಪೊಲೀಸರ ಸಮಯ ಪ್ರಜ್ಞೆ ವ್ಯಾಪಕ ಪ್ರಶಂಸೆಗೊಳಗಾಗಿದೆ.ಬಯ್ಯನವರಿಗೆ ಬಯ್ಯಮುಟ್ಟ ಪುರ್ಸೊತ್ತು ಕೊಡಲಿಲ್ಲ- ಒಂದೇ ಗಂಟೆಯಲ್ಲಿ ಅಂದರ್ !
ಮೂಡುಬಿದಿರೆಯ ಲಾಡಿಯ ಪ್ರಸಿದ್ಧ ಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಬ್ರಹ್ಮ ಕಲಶೋತ್ಸವಕ್ಕೆ ಶುಭಕೋರಿ ಅದೇ ವಾರ್ಡ್ ನ ಪುರಸಭಾ ಸದಸ್ಯ ಇಕ್ಬಾಲ್ ಕರೀಮ್ ಹಾಗೂ ಸ್ಥಳೀಯ ಪರಿಸರದ ಮುಸ್ಲಿಂ ಬಾಂಧವರು ಫ್ಲೆಕ್ಸ್ ಹಾಕಿದ್ದರು.
ಆದರೆ ಗುರುವಾರ ಬೆಳಿಗ್ಗೆ ನೋಡುವಾಗ ಕರೀಮ್ ಅವರ ಚಿತ್ರವಿದ್ದ ಜಾಗದಲ್ಲಿ ಅವರ ಮೂಗಿಗೆ ನೇರವಾಗಿ ಇರಿದು ಫ್ಲೆಕ್ಸ್ ಗೆ ಹಾನಿ ಮಾಡಿರುವುದು ಕಂಡುಬರುತ್ತದೆ. ಫ್ಲೆಕ್ಸ್ ಗೆ ಹಾನಿ ಮಾಡಿ ಅಶಾಂತಿ ಎಬ್ಬಿಸಲು ಕಾರಣರಾದವರು ಯಾರು ? ಅದರಲ್ಲೂ ಕರೀಮ್ ಸಾದು ಮನುಷ್ಯ, ಅವರದ್ದೇ ಮೂಗಿಗೆ ಇರಿಯಲು ಕಾರಣವೇನು ? ಇಂತಹ ದಂಡಪಿಂಡಗಳು ಯಾರು ? ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಸ್ಥಳೀಯ ಪರಿಸರದಲ್ಲಿ ಕಾಡತೊಡಗಿತ್ತು.
ಪೊಲೀಸರಿಗೆ ದೂರು ನೀಡಲಾಯಿತು. ಸ್ಥಳಕ್ಕೆ ಭೇಟಿ ನೀಡಿದ ಇನ್ಸ್ಪೆಕ್ಟರ್ ಸಂದೇಶ್ ಅವರು ಕೇವಲ ಒಂದೇ ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಮತ್ತೆಲ್ಲೂ ಇರಲಿಲ್ಲ.ಸ್ಥಳೀಯ ಹೊಟೇಲ್ ಕಾರ್ಮಿಕರಾಗಿದ್ದರು.ಅಂದಹಾಗೆ ಆರೋಪಿಗಳು ಕರೀಮ್ ಅವರ ದುಶ್ಮನ್ಗಳಲ್ಲ.ದೋಸ್ತ್ ಗಳೇ ಆಗಿದ್ದರು. ಕಳೆದ ರಾತ್ರಿ ಕೂಡ ಕರೀಮ್ ಅವರು ಚಾ ಕುಡಿದು ಹೋಗಿದ್ದರು.
ಆದರೆ ರಾತ್ರಿ ಕೆಲಸ ಮುಗಿಸಿ ಹೋಗುವಾಗ ಈ ಬಯ್ಯನವರಿಗೆ ಅದೇನು ಮರ್ಲ್ ಶುರುವಾಯಿತೋ ಗೊತ್ತಿಲ್ಲ.ಕರೀಮ್ ಅವರ ಭಾವಚಿತ್ರ ಕಂಡೊಡನೇ ‘ ಏ ಕರೀಮ್ ಬಾಯ್ ‘ ಎಂದು ಹೇಳುತ್ತಾ ಒಬ್ಬ ಕೈಯಿಂದ ಫ್ಲೆಕ್ಸ್ ಎಳೆದರೆ ಇನ್ನೊಬ್ಬ ಗಾಡಿಯ ಚಾವಿಯಿಂದ ಮೂಗಿನ ಸರ್ತೊಗೇ ಚೆನ್ನಾಗಿ ಇರಿದು ಮರ್ಲ್ ಕಟ್ಟಿದ್ದಾರೆ. ಅವರಿಗೆ ಗೊತ್ತಿಲ್ಲ,ಮರುದಿನ ಮಂಡೆ ಮತ್ತು ಕುಂಡೆ ಬಿಸಿ ಮಾಡಲಿಕ್ಕಿದೆ ಎಂದು!
ಬೆಳಿಗ್ಗೆ ಫ್ಲೆಕ್ಸ್ ನೋಡುವಾಗ ಕರೀಮ್ ಅವರ ಮೂಗೇ ಇಲ್ಲ. !
ಆರೋಪಿಗಳ ಕೃತ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ಅವರ ಹೆಸರು ಸಿರಾಜ್ ಅನ್ಸಾರಿ ಮತ್ತು ಮುಹಮ್ಮದ್ ಕಮ್ಡು ಜಮಾನ್. ಜಾರ್ಖಂಡ್ ಮತ್ತು ಬಿಹಾರ ಮೂಲದವರು.
ಈ ಬಯ್ಯನವರಿಗೆ ಈ ರೀತಿ ಮರ್ಲ್ ಕಟ್ಟುವ ಕಾಮ್ ಬೇಕಿತ್ತಾ?