Latest News

ಪಿಯುಸಿ: ಅಳಿಯೂರು ಸರಕಾರಿ ಕಾಲೇಜಿಗೆ ಶೇ.100 ಫಲಿತಾಂಶ

Picture of Namma Bedra

Namma Bedra

Bureau Report

ಶಾಸಕ ಉಮಾನಾಥ ಕೋಟ್ಯಾನ್ ಅವರ ವಿಶೇಷ ಮುತುವರ್ಜಿಯಿಂದ ಗ್ರಾಮೀಣ ಪ್ರದೇಶವಾದ ಅಳಿಯೂರಿಗೆ ಮಂಜೂರಾದ ಸರಕಾರಿ ಪದವಿ ಪೂರ್ವ ಕಾಲೇಜು ಸತತವಾಗಿ ಎರಡನೇ ವರ್ಷವೂ ಶೇ.100 ಫಲಿತಾಂಶ ದಾಖಲಿಸಿದೆ.
‌‌ ಕಾಲೇಜು ಆರಂಭವಾದ ಮೊದಲ ವರ್ಷದಲ್ಲೇ ಶೇ.100 ಫಲಿತಾಂಶ ಪಡೆದಿರುವ ಅಳಿಯೂರು ಕಾಲೇಜು ಈಬಾರಿಯೂ ಶೇ. 100 ಫಲಿತಾಂಶ ದಾಖಲಿಸುವ ಮೂಲಕ ಗಮನಸೆಳೆದಿದೆ.
ನೆಬೀಸತ್ ರಿಯಾನ 559 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮವಾದರೆ ಪೂರ್ಣಿಮಾ ಬೋರುಗುಡ್ಡೆ ( 525), ಸುಕನ್ಯಾ ವಾಲ್ಪಾಡಿ ( 509). ಹಾಗೂ ಸವಿತಾ ( 505) ಅವರು ಕ್ರಮವಾಗಿ ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನದಲ್ಲಿದ್ದಾರೆ.ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳೂ ಉತ್ತಮ ಫಲಿತಾಂಶ ಪಡೆದಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು