Latest News

ಜಯಂತಿ ಎಸ್.ಬಂಗೇರ ಅವರಿಗೆ ‘ತೌಳವ ಸಿರಿ’ ಪ್ರಶಸ್ತಿ

Picture of Namma Bedra

Namma Bedra

Bureau Report

ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಕರಾವಳಿ ಲೇಖಕಿಯರ- ವಾಚಕಿಯರ ಸಂಘದ ವತಿಯಿಂದ ಡಾ.ಸುನೀತಾ ಎಂ.ಶೆಟ್ಟಿ ದತ್ತಿನಿಧಿ ಪ್ರಾಯೋಜಿತ ‘ ತೌಳವ ಸಿರಿ’ ಪ್ರಶಸ್ತಿಗೆ ಮೂಡುಬಿದಿರೆಯ ತುಳು ಸಾಹಿತಿ, ‘ಉಡಲ್ ‘ ಪತ್ರಿಕೆಯ ಸಂಪಾದಕಿ ಶ್ರೀಮತಿ ಜಯಂತಿ ಎಸ್.ಬಂಗೇರ ಅವರು ಆಯ್ಕೆಯಾಗಿದ್ದಾರೆ.
ಮುಂಬಯಿಯ ಹಿರಿಯ ಸಾಹಿತಿ ಡಾ.ಸುನೀತಾ ಎಂ.ಶೆಟ್ಟಿ ಅವರ ಪ್ರಾಯೋಜತ್ವದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಎ.12 ರಂದು ಮಧ್ಯಾಹ್ನ ಮಂಗಳೂರಿನ ಸಾಹಿತ್ಯ ಸದನದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಯಂತಿ ಎಸ್.ಬಂಗೇರ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು