ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಅಳಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ನೆಬೀಸತ್ ರಿಯಾನ (559) ಹಾಗೂ ಸುಕನ್ಯಾ ವಾಲ್ಪಾಡಿ (509) ಅವರನ್ನು ಫ್ರೆಂಡ್ಸ್ ವಾಲ್ಪಾಡಿ ವತಿಯಿಂದ ಸನ್ಮಾನಿಸಲಾಯಿತು.
ವಾಲ್ಪಾಡಿ ಪಂಚಾಯತ್ ಸದಸ್ಯ ಅರುಣ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಶರೀಫ್ ಎಂ.ಎಂ, ಸುಧಾಕರ ಸುವರ್ಣ, ಅರಿಫ್, ಹಿರಿಯರಾದ ವಿಠಲ ಪೂಜಾರಿ, ಚೆನ್ನ ನಲ್ಕೆ, ಫ್ರೆಂಡ್ಸ್ ವಾಲ್ಪಾಡಿಯ ಅಶ್ರಫ್ ವಾಲ್ಪಾಡಿ, ಆಸಿಫ್, ಹನೀಫ್, ರಿಯಾಝ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
