ವಾಲ್ಪಾಡಿ ಪ್ರೀಮಿಯರ್ ಲೀಗ್: ವಿಠಲ ಪೂಜಾರಿ, ಲೈನ್ ಮ್ಯಾನ್ ಅಬ್ದುಲ್ಲಾ ಅವರಿಗೆ ಸನ್ಮಾನ

Picture of Namma Bedra

Namma Bedra

Bureau Report

ವಾಲ್ಪಾಡಿ ಫ್ರೆಂಡ್ಸ್ ಆಶ್ರಯದಲ್ಲಿ ನಡೆದ ಹತ್ತು ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ‘ವಾಲ್ಪಾಡಿ ಪ್ರೀಮಿಯರ್ ಲೀಗ್’ ನ ಸಮಾರೋಪ ಸಮಾರಂಭದಲ್ಲಿ ಹಿರಿಯರು,ಸಮಾಜ ಸೇವಕರೂ ಆದ ವಿಠಲ ಪೂಜಾರಿ ಹಾಗೂ ಶಿರ್ತಾಡಿ-ವಾಲ್ಪಾಡಿ ಪ್ರದೇಶದಲ್ಲಿ ತಮ್ಮ ನಿಷ್ಠೆ, ಪ್ರಾಮಾಣಿಕತೆಯ ಸೇವೆಯೊಂದಿಗೆ ಸರ್ವರ ಮನಗೆದ್ದಿರುವ ಲೈನ್ ಮ್ಯಾನ್ ಅಬ್ದುಲ್ಲಾ ಅವರನ್ನು ಸನ್ಮಾನಿಸಲಾಯಿತು.
ಫ್ರೆಂಡ್ಸ್ ವಾಲ್ಪಾಡಿ ಹಾಗೂ ಬೆದ್ರ ಕ್ರಿಕೆಟ್ ಯೂನಿಯನ್ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಅವರು ಸನ್ಮಾನಿತರ ಬಗ್ಗೆ, ಕ್ರಿಕೆಟ್ ಬಗ್ಗೆ ಮಾತನಾಡಿ ಅಭಿನಂದಿಸಿದರು.
ಅಳಯೂರು ‘ಸಿರಿ ಸಂಪದ’ ವಾಣಿಜ್ಯ ಸಂಕೀರ್ಣದ ಮಹಾವೀರ ಜೈನ್, ಉದ್ಯಮಿಗಳಾದ ಸುಧಾಕರ ಸುವರ್ಣ, ಶರೀಫ್ ಎಂ.ಎಂ, ಸುಕುಮಾರ್ ಜೈನ್ ಅಳಿಯೂರು, ಶಿವಾನಂದ ಪಾಂಡ್ರು, ಚೆನ್ನ ನಲ್ಕೆ, ವಿಘ್ನೇಶ್ ಆಚಾರ್ಯ, ಹಮಿದಾಕ ಕೋಟೆಬಾಗಿಲು, ಆರಿಫ್ ವಾಲ್ಪಾಡಿ, ಸಂಘಟಕರಾದ ಹನೀಫ್ ವಾಲ್ಪಾಡಿ, ರಿಯಾಝ್, ಆಸಿಫ್, ಅಲ್ತಾಫ್ ವಾಲ್ಪಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೀಕ್ಷಕ ವಿವರಣೆಗಾರ ಆಕಾಶ್ ಕೊಕ್ರಾಡಿ ಸ್ವಾಗತಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top