Latest News

ಇಕ್ಬಾಲ್ ಕರೀಮ್ ನೇತೃತ್ವದ ಜಿಗರ್ ಮೈಂಡ್ ತಂಡಕ್ಕೆ ಬೆದ್ರ ಕಪ್

Picture of Namma Bedra

Namma Bedra

Bureau Report

ಗ್ರೀನ್ ಲ್ಯಾಂಡ್ ಬೆದ್ರ ಹಾಗೂ ಬೆದ್ರ ಮೀಡಿಯಾ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ಹಗಲು ರಾತ್ರಿ ಕ್ರಿಕೆಟ್‌ ಪಂದ್ಯಾಟ ‘ ಬೆದ್ರ ಪ್ರೀಮಿಯರ್ ಲೀಗ್’ ನಲ್ಲಿ ಪುರಸಭಾ ಸದಸ್ಯ ಇಕ್ಬಾಲ್ ಕರೀಮ್ ಸಾರಥ್ಯದ ಜಿಗರ್ ಮೈಂಡ್ ತಂಡವು ಚಾಂಪಿಯನ್ ಪ್ರಶಸ್ತಿ ಗಳಿಸಿದೆ.
ಜಿಗರ್ ಮೈಂಡ್ ತಂಡವು ಪ್ರಥಮ ( ರೂ. ಒಂದು ಲಕ್ಷ ಹಾಗೂ ಟ್ರೋಫಿ) ಸ್ಥಾನ ಪಡೆದರೆ ಫ್ಲೈ ಝೋನ್ ಬೆಳುವಾಯಿ ತಂಡವು ದ್ವಿತೀಯ ( ರೂ.50 ಸಾವಿರ ಹಾಗೂ ಟ್ರೋಫಿ) ಸ್ಥಾನ ಗಳಿಸಿದೆ.
ಜಿಗರ್ ಮೈಂಡ್ ತಂಡದ ನೌಫಲ್ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರೆ ಫ್ಲೈ ಝೋನ್ ತಂಡದ ಫಯಾಝ್ ಉತ್ತಮ ಎಸೆತಗಾರ ಹಾಗೂ ಅದೇ ತಂಡದ ಆತಿಫ್ ಉತ್ತಮ ಗೂಟರಕ್ಷಕ ಪ್ರಶಸ್ತಿ ಪಡೆದರು.
ಬಹುಮಾನ ವಿತರಣಾ ಸಂದರ್ಭದಲ್ಲಿ ಹನೀಫ್ ರಹ್ಮಾನಿಯಾ, ರಝಾಕ್ ಕೋಟೆಬಾಗಿಲು, ಇಕ್ಬಾಲ್ ಕರೀಮ್,ಶಫಿಕ್,ಸಫ್ವಾನ್ , ಬೆದ್ರ ಮೀಡಿಯಾ ಮುಖ್ಯಸ್ಥ ಇರ್ಫಾನ್, ನೌಫಲ್ ಬೆದ್ರ, ಅಲ್ತಾಫ್ ವಾಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top