ಊಟಿಯ ಶ್ರೀನಿವಾಸ ಪೆರುಮಲ್ ಕಲ್ಯಾಣಮಂಟಪದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕರಾಟೆ ಶಿಕ್ಷಕ ಮುಹಮ್ಮದ್ ನದೀಮ್ ಅವರ ಶಿಷ್ಯಂದಿರು ಕೆಲವು ಪದಕಗಳನ್ನು ಗಳಿಸಿದ್ದಾರೆ.
ಮಂಗಳೂರಿನ ಹಫ್ಸಾ ಶಾಝ್ 21 ವರ್ಷ ಕೆಳಗಿನ ಹುಡುಗಿಯರ ಕುಮಿತಿ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಕಂಚಿನ ಪದಕ, ಶಹಾನ್ ಮುಹಮ್ಮದ್ 15 ವರ್ಷ ವಯೋಮಿತಿಯ ಕುಮಿತಿ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಬೆಳ್ಳಿಯ ಪದಕ,ಮುಹಮ್ಮದ್ ಇಯಾದ್ ಇಬ್ರಾಹಿಂ 18 ವರ್ಷ ವಯೋಮಿತಿಯ ಕುಮಿತಿ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಕಂಚಿನ ಪದಕ ಹಾಗೂ ತಲ್ಹಾ ಝಯಿನ್ 21 ವರ್ಷ ವಯೋಮಿತಿಯ ಕುಮಿತಿ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ.
ಪದಕ ವಿಜೇತರೆಲ್ಲರೂ ಶೋರಿನ್ ರಿಯೂ ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕ ಮುಹಮ್ಮದ್ ನದೀಮ್ ಅವರಿಂದ ಮಂಗಳೂರಿನ ಶೇಫಾರ್ಡ್ ಮಾರ್ಷಲ್ ಆರ್ಟ್ಸ್ & ಫಿಟ್ನೆಸ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.













