ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಯೋತ್ಪಾದಕರ ವಿರುದ್ಧ ಹಮ್ಮಿಕೊಂಡ ಭಾರತೀಯ ಸೇನೆಗೆ ಯಾವುದೇ ತೊಂದರೆಯಾಗದಿರಲಿ,ಭಯೋತ್ಪಾದನೆ ಸಂಪೂರ್ಣ ನಿರ್ನಾಮವಾಗಲಿ,ನಮ್ಮ ಸೇನೆ ಗೆದ್ದುಬರಲಿ ಎಂದು ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ಐ.ರಾಘವೇಂದ್ರ ಅಸ್ರಣ್ಣ,ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಜಾತ ಜಯರಾಂ ಶೆಟ್ಟಿ, ಸದಸ್ಯರಾದ ಪೂವಪ್ಪ ಸಾಲ್ಯಾನ್, ಪ್ರದೀಪ್ ಶೆಟ್ಟಿ,ಶಿವಾನಂದ ನಾಯ್ಕ್,ದೀಪಾ ದಿನೇಶ್, ಹೊಸಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜೇಶ್ ಪೂಜಾರಿ ಕಾಳೂರು,ಕೆ.ಡಿ.ಪಿ.ಸದಸ್ಯ ಪ್ರವೀಣ್ ಪೂಜಾರಿ, ಗುತ್ತುಬಾಳಿಕೆ ಮನೆತನದ ಪದ್ಮನಾಭ ಪ್ರಭು,ಕೃಷ್ಣ ಪ್ರಭು, ಸ್ಥಳೀಯರಾದ ದಿನೇಶ್ ಪೂಜಾರಿ ಕಟ್ಟಣಿಗೆ ಮತ್ತಿತರರು ಉಪಸ್ಥಿತರಿದ್ದರು.






