ಆರಂಬೋಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಪ್ರಸಿದ್ಧಿ ಪಡೆದಿರುವ ಟೋಟಲ್ ಕ್ಲೀನ್ ಲಾಂಡ್ರಿ ಸರ್ವಿಸ್ ನ ಮೂಡುಬಿದಿರೆ ಶಾಖೆಯು ಪುರಸಭಾ ಕಚೇರಿಯ ಎದುರಿನ ನೀತಿ ಹೈಟ್ಸ್ ಕಟ್ಟಡದಲ್ಲಿ ಶುಭಾರಂಭಗೊಂಡಿದೆ.

ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ (ಅಬ್ಬಾಕ) ಅವರು ಈ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಒಕ್ಕಾಡಿಗೋಳಿ ಜುಮ್ಮಾ ಮಸೀದಿಯ ಖತೀಬರಾದ ಮುಹಮ್ಮದ್ ನಿಯಾಝ್ ಫೈಝಿ ಅವರು ದುವಾ ನೆರವೇರಿಸಿದರು.
ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಬ್ದುಸ್ಸಲಾಮ್ ಬೂಟ್ ಬಝಾರ್,ಎಲಿಯಾ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್, ಕ್ಯೂಟ್ ಬಟ್ಟೆ ಮಳಿಗೆ ಮಾಲಕ ಮಂಜುನಾಥ,ಎಸ್.ಎಚ್.ಅಬ್ದುಲ್ ರಹ್ಮಾನ್ ಆರಂಬೋಡಿ,ಸದರ್ ಬಶೀರ್ ಜಾಹರಿ, ಇಸ್ಮಾಯಿಲ್ ಬೂಟ್ ಬಝಾರ್,ಆದಮ್ ನಡ್ತಿಕಲ್ಲು,ಜಾಕೊಬ್ ಕರ್ಡೋಝ,ಶಬೀರ್ ಅಹ್ಮದ್,ವಿ.ಕೆ.ಮುಹಮ್ಮದ್ ಅಲ್ತಾಫ್ ವೀರಕಂಬ, ಖಾಲಿದ್ ಕಲ್ಲಡ್ಕ ಮತ್ತಿತರರು ಭಾಗವಹಿಸಿ ಯಶಸ್ಸನ್ನು ಹಾರೈಸಿದರು.
ಸಂಸ್ಥೆಯ ಮಾಲಕ ಎಸ್.ಮುಹಮ್ಮದ್ ಆರಂಬೋಡಿ ಅವರು ಸ್ವಾಗತಿಸಿ ಸರ್ವರ ಸಹಕಾರ ಕೋರಿದರು.ಪತ್ರಕರ್ತ ಎಚ್.ಮುಹಮ್ಮದ್ ವೇಣೂರು ಕಾರ್ಯಕ್ರಮ ನಿರೂಪಿಸಿದರು.ಅಕ್ಬರ್ ವೇಣೂರು ವಂದಿಸಿದರು.










