ಇದು ಶಿರ್ತಾಡಿ- ಹೊಸಂಗಡಿ ಸಂಪರ್ಕ ಕಲ್ಪಿಸುವ ಗುಂಡಡಪ್ಪು ಸೇತುವೆ. ಈಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ಈ ಸಂಕವು ಅದ್ಹೇಗೋ ಕಳೆದ ವರ್ಷ ಉದ್ಘಾಟನೆಯಾಗಿತ್ತು.ಜನರು ನಮ್ಮೂರಿಗೆ ಸಂಕ ಆಯ್ತಲ್ಲಾ ಎಂದು ಸಂಭ್ರಮಿಸಿದ್ದರು.ಆದರೆ ಒಂದೇ ವರ್ಷದ ಅಂತರದಲ್ಲಿ ಈಗ ಒಂದು ಸಂಕಟ ಶುರುವಾಗಿದೆ.



ಸಂಕದ ಮೇಲಿನ ಸಂಪರ್ಕ ರಸ್ತೆ ಸುಮಾರು 6 ಇಂಚಿನಷ್ಟು ಕುಸಿದಿದೆ. ದ್ವಿಚಕ್ರ ವಾಹನ ಸವಾರರಿಗೆ ಇದರ ಅನುಭವವಾಗುತ್ತಿದೆ. ಮಳೆಗಾಲದ ಈ ದಿನಗಳಲ್ಲಿ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವಾಗ ಕೊಂಚ ಎಚ್ಚರದಿಂದ ಚಲಿಸಬೇಕಾಗಿದೆ.ಒಂದೇ ವರ್ಷದಲ್ಲಿ ಈ ಸಂಕವು ಸಂಕಟ ಎದುರಿಸಬೇಕಾದರೆ ಗುತ್ತಿಗೆದಾರನ ಮಿಸ್ಟೇಕಾ, ಡಾಮಾರಿನ ಮಿಸ್ಟೇಕಾ, ಪೊಯ್ಯೆ ಜಲ್ಲಿಯ ಮಿಸ್ಟೇಕಾ ಎನ್ನುವುದು ತನಿಖೆಯಾಗಬೇಕಷ್ಟೆ.



ಇನ್ನೊಂದು ಗಂಡಾಂತರ ಇದೆ. ಸೇತುವೆ ಮೇಲೆ ತಡೆಬೇಲಿ ಹಾಕಿದ್ದಾರಲ್ಲಾ..ಅದರ ಪಕ್ಕ ಹೋಗುವುದೂ ರೇಂಜರ್. ಎರಡು ಕಡೆ ತಡೆಬೇಲಿ ಸಂಪೂರ್ಣಗೊಳಿಸದೆ ಮಧ್ಯದಲ್ಲಿ ಸ್ವಲ್ಪ ಗ್ಯಾಪ್ ಬಿಟ್ಟಿದ್ದಾರೆ.ಅದ್ಯಾವ ತಿಗಲ್ದಕಟ್ಟಕ್ಕೆ ಹಾಗೆ ಗ್ಯಾಪ್ ಬಿಟ್ಟಿದ್ದಾರಾ ….ಬಿಟ್ಟವರಿಗೇ ಗೊತ್ತು. ಅಲ್ಲಿ ಯಾರಾದರೂ ಇಣುಕುವ ಸಾಹಸಮಾಡಿ ಒಂಚೂರು ಮೈ ಮಾಲಿದರೆ ಮರುದಿನ ಈಶ್ವರ್ ಮಲ್ಪೆ ತಂಡದವರೇ ಬರಬೇಕಾದೀತು!
ಹಾಗಾಗಿ ಗ್ಯಾಪ್ ಇದೆ ಎಂದು ಗ್ಯಾಪ್ ಫಿಲ್ಲಪ್ ಮಾಡುವ ಸಾಹಸಕ್ಕೆ ಮುಂದಾದರೆ ಡೇಂಜರ್ ಖಂಡಿತ.
ಯಾವುದಕ್ಕೂ ಸಂಬಂಧಪಟ್ಟವರು ಇಲ್ಲಿಗೊಮ್ಮೆ ವಿಸಿಟ್ ಕೊಡುವುದೊಳ್ಳೆಯದು.















