ಮೂಡುಬಿದಿರೆ: ಅಲಂಗಾರು ಲಯನ್ಸ್ ಕ್ಲಬ್ ನ 2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಲೊಯೊಲ ಅಂಬುಲೆನ್ಸ್ ಸರ್ವಿಸ್ ನ ಮಾಲಕರಾಗಿರುವ ಅಮಿತ್ ಡಿಸಿಲ್ವ ಅವರು ಆಯ್ಕೆಯಾಗಿದ್ದಾರೆ.
ಪಾಲಡ್ಕ ಮೂಲದವರಾಗಿರುವ ಅಮಿತ್ ಡಿಸಿಲ್ವ ಅವರು ಮೂಡುಬಿದಿರೆಯಲ್ಲಿ ಲೊಯೊಲ ಅಂಬುಲೆನ್ಸ್ ಸೇವೆ ಪ್ರಾರಂಭಿಸಿ ಜಿಲ್ಲೆಯಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ.
ತನ್ನ ಅಂಬುಲೆನ್ಸ್ ಸೇವೆಯ ಮೂಲಕ ಅದೆಷ್ಟೋ ಬಡಜನರಿಗೆ ನೆರವಾಗಿರುವ ಅಮಿತ್ ಡಿಸಿಲ್ವ ಅವರ ಸೇವೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿದೆ.
ಇದೀಗ ಲಯನ್ಸ್ ಕ್ಲಬ್ ಎಂಬ ದೊಡ್ಡ ಸಂಘಟನೆಯಲ್ಲಿ ಜನಸೇವೆ ಮಾಡುವ ಅವಕಾಶ ಅವರ ಪಾಲಿಗೊದಗಿದೆ.
ಕಾರ್ಯದರ್ಶಿಯಾಗಿ ರಿಚರ್ಡ್ ಡಿಸೋಜ, ಖಜಾಂಚಿಯಾಗಿ ರೋಕಿ ಮಸ್ಕರೇನಸ್ ಅವರು ಆಯ್ಕೆಯಾಗಿದ್ದಾರೆ.






