ಮೂಡುಬಿದಿರೆ ಲಯನ್ಸ್ ಕ್ಲಬ್ ನ 2025- 26 ನೇ ಸಾಲಿನ ಸುವರ್ಣ ಮಹೋತ್ಸವ ಅವಧಿಗೆ ಅಧ್ಯಕ್ಷರಾಗಿ ಮಂಜುಶ್ರೀ ವಾಹನ ತರಬೇತಿ ಸಂಸ್ಥೆಯ ಮುಖ್ಯಸ್ಥ ಶಿವಪ್ರಸಾದ್ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಓಸ್ವಲ್ಡ್ ಡಿಸೋಜ ಹಾಗೂ ಕೋಶಾಧಿಕಾರಿಯಾಗಿ ಹರೀಶ್ ತಂತ್ರಿ ಅವರು ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹೊಟೆಲ್ ಪಂಚರತ್ನದಲ್ಲಿ ಇತ್ತೀಚೆಗೆ ನಡೆಯಿತು.

ಪದಗ್ರಹಣ ಅಧಿಕಾರಿಯಾಗಿ ಪೂರ್ವ ರಾಜ್ಯಪಾಲರಾದ ಲ.ವಸಂತ್ ಕುಮಾರ್ ಶೆಟ್ಟಿ ಅವರು ಭಾಗವಹಿಸಿದ್ದರು.
ನಿಕಟಪೂರ್ವ ಅಧ್ಯಕ್ಷರಾದ ಬೊನವೆಂಚರ್ ಮಿನೇಜಸ್,ಪ್ರಾಂತಾಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ,ವಲಯಾಧ್ಯಕ್ಷರಾದ ಜೊಸ್ಸಿ ಮಿನೇಜಸ್,ಮೆಲ್ವಿನ್ ಸಲ್ದಾನ್ಹ,ವಿನೋದ್ ಡೇಸ, ದಿನೇಶ್ ಎಂ.ಕೆ, ಪ್ರಶಾಂತ್ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






