ಅಳಿಯೂರು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ, ಅಭಿನಂದನಾ ಸಮಾರಂಭ

Picture of Namma Bedra

Namma Bedra

Bureau Report

ಅಳಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ, ಶೇ.100 ಫಲಿತಾಂಶ ಬರಲು ಕಾರಣೀಕರ್ತರಾದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಅಭಿನಂದಿಸುವ ಕಾರ್ಯಕ್ರಮವು ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೋಟ್ಯಾನ್’ ಕಾಲೇಜು ಪ್ರಾರಂಭಕ್ಕೆ ತಾನು ಪಟ್ಟ ಶ್ರಮಕ್ಕೆ ಈಬಾರಿಯ ಫಲಿತಾಂಶವು ನೆಮ್ಮದಿ ಕೊಟ್ಟಿದೆ, ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಶ್ರಮಕ್ಕೆ ಅಭಿನಂದನೆ ‘ ಎಂದರು.


ರಾಜ್ಯ ಕಬಡ್ಡಿ ತೀರ್ಪುಗಾರರಾಗಿ ಆಯ್ಕೆಯಾಗಿರುವ ದೈಹಿಕ ಶಿಕ್ಷಕ ಭಾಸ್ಕರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವರ್ಗಾವಣೆಗೊಂಡ ಉಪನ್ಯಾಸಕರನ್ನು ಅಭಿನಂದಿಸಿ ನೂತನ ಉಪನ್ಯಾಸಕರನ್ನು ಸ್ವಾಗತಿಸಲಾಯಿತು.
ದಾನಿಗಳಾದ ರಮಾನಂದ ಸಾಲ್ಯಾನ್ ಅಳಿಯೂರು, ಶ್ರೀಮತಿ ಹೇಮಾ ಕೆ.ಪೂಜಾರಿ, ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು,ಲಕ್ಷ್ಮಣ ಸುವರ್ಣ, ಗಣೇಶ್ ಬಿ.ಅಳಿಯೂರು, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಚಿನ್ಮಯಾನಂದ್ , ಪ್ರವೀಣ್ ,ವಾಲ್ಪಾಡಿ ಪಂಚಾಯತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಶ್ರೀಮತಿ ಮಮತಾ ಸ್ವಾಗತಿಸಿ ಸಂತೋಷ್ ವಂದಿಸಿದರು. ಶ್ರೀಮತಿ ಶಾರದಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಅರುಣಾ, ಶ್ರೀಮತಿ ಪೂಜಾ ಸಹಕರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top