ಇರುವೈಲಿನಲ್ಲಿ ಅಂದರ್ -ಬಾಹರ್: ಏಳು ಮಂದಿ ಅಂದರ್
ಇರುವೈಲಿನ ಕೋರಿಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಇಸ್ಪೀಟು ಅಡ್ಡೆಗೆ ದಾಳಿ ನಡೆಸಿದ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರ ತಂಡವು ಏಳು ಮಂದಿಯನ್ನು ಬಂಧಿಸಿ ಜೂಜಿಗೆ ಬಳಸಿದ್ದ ನಗದು,ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ಬರ್,ಸಂತೋಷ್,ಪ್ರಶಾಂತ್,ಮಹಾಬಲ ಪೂಜಾರಿ,ಪ್ರಜ್ವಲ್,ಗಿರೀಶ್, ರಾಜೇಶ್ ಬಂಧಿತರು.ಗಣೇಶ್, ಶ್ರೀನಾಥ್,ದಿನೇಶ್ ಕೆಂಪುಗುಡ್ಡೆ,ಕೇಶವ ಯಾನೆ ಅಪ್ಪು ಹಾಗೂ ಇನ್ನಿತರರು ಓಡಿ ಹೋದವರು.


ಆರೋಪಿಗಳಿಂದ 10,100 ನಗದು, ಎರಡು ದ್ವಿಚಕ್ರ ವಾಹನಗಳು , 52 ಇಸ್ಪೀಟು ಎಲೆಗಳು ಹಾಗೂ ಎರಡು ಮೇಣದ ಬತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಂದೇಶ್ ಪಿ.ಜಿ.ಅವರ ನೇತ್ರತ್ವದಲ್ಲಿ ನಡೆದ ಈ ದಾಳಿಯಲ್ಲಿ ಸಿಬ್ಬಂದಿಗಳಾದ ರಾಜೇಶ್,ನಾಗರಾಜ್, ಸುರೇಶ್,ವೆಂಕಟೇಶ್, ಚಂದ್ರಶೇಖರ ಹಾಗೂ ಚಾಲಕ ಉಮೇಶ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.






