ಶಿರ್ತಾಡಿ ಸೇವಾ ಸಹಕಾರಿ ಸಂಘ: ಪ್ರವೀಣ್ ಕುಮಾರ್ ಟೀಮ್ ಕ್ಲೀನ್ ಸ್ವೀಪ್

Picture of Namma Bedra

Namma Bedra

Bureau Report

ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದಿಂದ ಜನರ ಬೇಡಿಕೆ ಮೇರೆಗೆ ವಿಭಜನೆಗೊಂಡು ಶಿರ್ತಾಡಿಯಲ್ಲಿ ಅಸ್ತಿತ್ವಕ್ಕೆ ಬಂದ ಶಿರ್ತಾಡಿ ಸೇವಾ ಸಹಕಾರಿ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಕಲ್ಲಬೆಟ್ಟು ಸೇ.ಸ.ಸಂಘದ ಮಾಜಿ ಅಧ್ಯಕ್ಷ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್ ನೇತೃತ್ವದ ತಂಡವು ಎಲ್ಲಾ ಸ್ಥಾನಗಳನ್ನೂ ಗೆದ್ದುಕೊಂಡಿದೆ.


ಸಾಮಾನ್ಯ ಕ್ಷೇತ್ರದಿಂದ ಪ್ರವೀಣ್ ಕುಮಾರ್,ಚಿಂತನ್ ಸಿಲ್ವನ್ ಲೋಬೋ, ತಾರನಾಥ ಶೆಟ್ಟಿ,ಕೆ.ಎಚ್.ಲಕ್ಷ್ಮಣ,ಅಬ್ದುಲ್ ಖಾದರ್ ಹಾಗೂ ಸನತ್ ಶೆಟ್ಟಿ ಅವರು ಜಯಗಳಿಸಿದರೆ ಮಹಿಳಾ ಕ್ಷೇತ್ರದಿಂದ ಆಗ್ನೆಸ್ ಡಿಸೋಜ ಹಾಗೂ ಸುಗಂಧಿ,ಹಿಂದುಳಿದ ಎ.ಕ್ಷೇತ್ರದಿಂದ ರಾಘವ ಪಿ.ಸುವರ್ಣ ಹಾಗೂ ಸದಾನಂದ ಸುವರ್ಣ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಉಮೇಶ್ ನಾಯ್ಕ ಅವರು ಗೆದ್ದರೆ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸುದೀಪ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಒಟ್ಟು ಹನ್ನೆರಡು ಸ್ಥಾನಗಳ ಪೈಕಿ ಹನ್ನೆರಡನ್ನೂ ಗೆದ್ದುಕೊಳ್ಳುವ ಮೂಲಕ ಪ್ರವೀಣ್ ಕುಮಾರ್ ಅವರ ತಂಡವು ಶಿರ್ತಾಡಿಯಲ್ಲೊಂದು ಹೊಸ ದಾಖಲೆ ನಿರ್ಮಿಸಿದೆ.


ಗೆದ್ದವರನ್ನೆಲ್ಲಾ ಮಾಜಿ ಸಚಿವ ಕೆ.ಅಭಯಚಂದ್ರ, ಶಿರ್ತಾಡಿ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕೋಟ್ಯಾನ್,ಪ್ರವೀಣ್ ಪಿಂಟೊ, ಸತೀಶ್ ಕೆ.ಕಾಶಿಪಟ್ಣ ಮತ್ತಿತರ ಪ್ರಮುಖರು ಅಭಿನಂದಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top