ಬೆದ್ರದ ಆಳ್ವಾಸ್ ರಸ್ತೆಯಲ್ಲಿರುವ R.R.ಪ್ಲಾಝಾ ಎದುರು ರಸ್ತೆ ಪಕ್ಕದಲ್ಲೇ ಕಸದ ರಾಶಿ ಇತ್ತು.ಪುರಸಭೆಯವರಿಗೆ ಹಲವು ಬಾರಿ ತಿಳಿಸಿದರೂ ಕಸದ ಕಟ್ಟುಗಳು ರಸ್ತೆ ಪಕ್ಕದಲ್ಲೇ ಇದ್ದು ಸಾರ್ವಜನಿಕರಿಗೆ ದುರ್ವಾಸನೆ ನೀಡುತ್ತಿತ್ತು.
ದುರ್ವಾಸನೆಯಿಂದ ಬೇಸತ್ತ ಅಪಾರ್ಟ್ಮೆಂಟ್ ನಿವಾಸಿಗಳು ಸಂತೋಷ್ ಶೆಟ್ಟಿ ಅವರಿಗೆ ತಿಳಿಸುತ್ತಾರೆ.ಅವರೇನೂ ಈ ಭಾಗದ ಕೌನ್ಸಿಲರ್ ಅಲ್ಲ. ಆದರೂ ಜನರ ಸಮಸ್ಯೆಗೆ ಸ್ಪಂದಿಸಿದ ಅವರು ಪುರಸಭೆಯವರನ್ನು ಸಂಪರ್ಕಿಸಿ ರಾಶಿಬಿದ್ದು ದುರ್ವಾಸನೆ ಬೀರುತ್ತಿದ್ದ ಕಸವನ್ನು ಶೀಘ್ರವಾಗಿ ವಿಲೇವಾರಿ ಮಾಡಿಸುತ್ತಾರೆ.ಸಂತೋಷ್ ಶೆಟ್ಟಿ ಅವರ ಈ ಸ್ಪಂದನೆಗೆ ಈ ಪರಿಸರದ ಜನತೆ ಪ್ರಶಂಸೆಗಳನ್ನು ವ್ಯಕ್ತಪಡಿಸಿದ್ದಾರೆ.ಫ್ಲಾಟ್ ನಿವಾಸಿಗಳ ಪರವಾಗಿ ಫ್ಲಾಟ್ ವಾಸಿ ಹಫೀಝ್ ತೋಡಾರ್ ಹಾಗೂ ಇತರರು ಸಂತೋಷ್ ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.














