ಅಬ್ದುಲ್ ನಝೀರ್ ಅವರು ಉಪರಾಷ್ಟ್ರಪತಿ ?

Picture of Namma Bedra

Namma Bedra

Bureau Report

BREAKING NEWS

ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ರಾಜೀನಾಮೆ ನೀಡಿರುವ ಬೆನ್ನಲ್ಲೇ ಆ ಮಹೋನ್ನತ ಸ್ಥಾನಕ್ಕೆ ಮೂಡುಬಿದಿರೆ ಮೂಲದವರಾಗಿರುವ ,ಸುಪ್ರೀಮ್ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರ ಹೆಸರು ಮುಂಚೂಣಿಗೆ ಬಂದಿದೆ.
ಧನ್ಕರ್ ಅವರ ದಿಢೀರ್ ರಾಜೀನಾಮೆಗೆ ಕಾರಣ ತಿಳಿದು ಬಂದಿಲ್ಲ.ಆದರೆ ಆ ಸ್ಥಾನಕ್ಕೆ ಅಬ್ದುಲ್ ನಝೀರ್ ಅವರ ಹೆಸರು ಕೇಳಿಬರುತ್ತಿದೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾಗಿರುವ ನಝೀರ್ ಅವರು ಪ್ರಸ್ತುತ ಆಂದ್ರಪ್ರದೇಶದ ರಾಜ್ಯಪಾಲರಾಗಿದ್ದಾರೆ.
ಮೂಡುಬಿದಿರೆ ಕಾನ ನಿವಾಸಿಯಾಗಿರುವ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೂಡುಬಿದಿರೆಯಲ್ಲೇ ಮಾಡಿದ್ದರಲ್ಲದೆ ನ್ಯಾಯವಾದಿಯಾಗಿಯೂ ಇಲ್ಲೇ ವೃತ್ತಿ ಜೀವನ ಆರಂಭಿಸಿದ್ದರು.
ಒಂದುವೇಳೆ ಉಪರಾಷ್ಟ್ರಪತಿಯಾಗಿ ಅವರ ಹೆಸರೇ ಅಂತಿಮಗೊಂಡಲ್ಲಿ ಕರ್ನಾಟಕ ಹಾಗೂ ಮೂಡುಬಿದಿರೆಗೆ ಹೆಮ್ಮೆಯ ವಿಚಾರವಾಗಲಿದೆ. ಈಗಾಗಲೇ ರಾಷ್ಟ್ರದ ಉನ್ನತ ಹುದ್ದೆಗಳನ್ನಲಂಕರಿಸಿ ದೇಶದಾದ್ಯಂತ ಹೆಸರುಗಳಿಸಿರುವ ನಝೀರ್ ಅವರು ನಮ್ಮ ಮೂಡುಬಿದಿರೆಯವರೆಂಬ ಹೆಮ್ಮೆ ಮೂಡುಬಿದಿರೆಯವರದ್ದು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top