ಇದು ನೆಲ್ಲಿಕಾರು ಪಂಚಾಯತ್ ವ್ಯಾಪ್ತಿಯ ರಸ್ತೆ. ವಾಲ್ಪಾಡಿಯ ಕೋಯ್ಕುಡೆ ಚಡಾವ್ ನ ರೈಟ್ ಗೆ ತಿರುಗಿ ಸ್ವಲ್ಪ ಮುಂದೆ ಹೋದಾಗ ಈ ರಸ್ತೆಯ ಪರಿಸ್ಥಿತಿ ಗೊತ್ತಾಗುತ್ತದೆ.


ಪ್ರಸಿದ್ಧ ಪಿದಮಲೆ ದೇವಸ್ಥಾನಕ್ಕೂ ಇದೇ ಹತ್ತಿರದ ದಾರಿಯಾಗಿರುವುದರಿಂದ ಹೆಚ್ಚಿನ ಜನರು ಈ ರಸ್ತೆಯನ್ನೇ ಬಳಸುತ್ತಾರೆ. ಆದರೆ ,ಈಗ ಮಾತ್ರ ಇಲ್ಲಿಂದ ಹೋಗುವುದೇ ಡೇಂಜರ್ ಎಂಬಂತಾಗಿದೆ.
ವಾಲ್ಪಾಡಿಯಾಗಿ, ಪಿದಮಲೆಯಾಗಿ ಮಾಂಟ್ರಾಡಿಗೆ ಹೋಗಲು ತುಂಬಾ ಕೈತಲ್ ಆಗುತ್ತದೆ.ಜನರಿಗೆ ಇದರಿಂದ ಪ್ರಯೋಜನವೂ ಇದೆ. ಆದರೆ ,ಈಗ ಮರಿಯಾಲ ಅಲ್ವಾ ? ರಸ್ತೆಯಲ್ಲಿ ಡಾಮಾರು ಇದೆಯಾ, ಜಲ್ಲಿ ಇದೆಯಾ ಎನ್ನುವುದೇ ಗೊತ್ತಾಗುತ್ತಿಲ್ಲ. ದ್ವಿಚಕ್ರ ವಾಹನ ,ಇತರ ವಾಹನಗಳಿಗಂತೂ ಇಲ್ಲಿಂದ ಸಂಚರಿಸುವುದೆಂದರೆ ಒಂದು ರೀತಿಯ ಸರ್ಕಸ್ ಮಾಡಿದಂತೆ.
ಪಕ್ಕದ ಗ್ರಾಮ ಪಂಚಾಯತ್ ಗೆ ಹೋಲಿಸಿದರೆ ಈ ಪಂಚಾಯತ್ ವ್ಯಾಪ್ತಿಯ ರಸ್ತೆಗಳು ತೀರಾ ಹದಗೆಟ್ಟಿದೆ.ಹಾಗಂತ ಈ ರಸ್ತೆಯ ಬಗ್ಗೆ ಪಂಚಾಯತ್ ಗೆ ಸಂಬಂಧಪಟ್ಟವರಿಗೆ ಗೊತ್ತಿದೆ.ಮಳೆಗಾಲದಲ್ಲಿ ಜನರಿಗೆ ಸಮಸ್ಯೆಯಾಗಬಹುದೆಂಬ ಅರಿವಿದ್ದರೂ ಅರೆಗ್ಗಾಲದಲ್ಲಿ ವಹಿಸಿದ್ದ ಮೌನ ಈಗ ಜನರಿಗೆ ತೊಂದರೆ ನೀಡುತ್ತಿದೆ.
ಡೌಟಿದ್ದರೆ ಸಂಬಂಧಪಟ್ಟವರೊಮ್ಮೆ ತಮ್ಮ ವಾಹನವನ್ನು ರೈಟ್ ಗೆ ತಿರುಗಿಸುವುದೊಳ್ಳೆಯದು, ಅಳಿಯೂರು ಕಡಯಿಂದ ವಾಲ್ಪಾಡಿ ಕಡೆಗೆ ಬರುವುದಾದರೆ ಲೆಫ್ಟ್ ಗೆ ತೆಗೊಳ್ಳಿ!






