ಸಮಿತ್ ರಾಜ್ ನೊಂದಿಗೆ ಸಂಬಂಧವಿಲ್ಲವೆಂದ ಶಾಸಕ ಕೋಟ್ಯಾನ್ ಆತನನ್ನು ಕಾಣಲು ಜೈಲಿಗೆ ಹೋದದ್ದೇಕೆ? : ಮಿಥುನ್ ರೈ ತಿರುಗೇಟು

Picture of Namma Bedra

Namma Bedra

Bureau Report

ಶಾಸಕ ಉಮಾನಾಥ ಕೋಟ್ಯಾನ್ ಅವರು ‘ನನಗೂ ಸಮಿತ್ರಾಜ್ ದರೆಗುಡ್ಡೆಗೂ ಯಾವುದೇ ಸಂಬಂಧವಿಲ್ಲವೆಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು, ಆದರೆ ಮೊಬೈಲ್ ನಲ್ಲಿ ಬ್ಲೂ ಫಿಲಮ್ ಸ್ಟಾಕ್ ಮಾಡಿಟ್ಟಿದ್ದ ಆರೋಪದಲ್ಲಿ ಕಳೆದ 26 ನೇ ತಾರೀಕಿನಂದು ಜೈಲಿಗೆ ಹೋಗಿದ್ದ ಸಮಿತ್ರಾಜ್ ನನ್ನು ಭೇಟಿಯಾಗಲು ಇದೇ ಉಮಾನಾಥ ಕೋಟ್ಯಾನ್ ಹೋಗಿದ್ದಾರೆ, ಹಾಗಾದರೆ ಶಾಸಕರು ಜನರಿಗೆ ಸುಳ್ಳು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ತಿರುಗೇಟು ನೀಡಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಉಮಾನಾಥ ಕೋಟ್ಯಾನ್ ಒಬ್ಬ ನೈಜ ಕಲಾವಿದ ಎನ್ನುವುದು ಮೊನ್ನೆಯ ಅವರ ಹೇಳಿಕೆಯಿಂದ ಸಾಬೀತಾಗಿದೆ, ನನಗಾಗಲೀ,ಅಭಯರಿಗಾಗಲೀ ಅವರಹಾಗೆ ನಟನೆ ಮಾಡಲು ಬರುವುದಿಲ್ಲ,ನಾವು ಏನಿದ್ದರೂ ನೇರವಾಗಿ ಹೇಳಿಬಿಡುತ್ತೇವೆ, ಮುಂದಿನ ದಿನಗಳಲ್ಲಿ ಉಮಾನಾಥ ಕೋಟ್ಯಾನ್- ಸಮಿತ್ರಾಜನ ಎಲ್ಲ ವಿಷಯಗಳನ್ನೂ ಜನರ ಮುಂದಿಡಲಿದ್ದೇವೆ ಎಂದು ಹೇಳಿದ ಅವರು ಕಳೆದಬಾರಿ ಅದೇ ಸಮಿತ್ ರಾಜ್ ನನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಂಡು ಬಂದಿದ್ದ ಶಾಸಕರು ಮೊನ್ನೆ ಆತನನ್ನು ಭೇಟಿಯಾಗಿ ಮಾತನಾಡಲು ಜೈಲಿಗೆ ಹೋಗಿದ್ದರು, ಇದರಿಂದ ಅವರ ಸಿಡಿ ಕೂಡಾ ಆತನಲ್ಲಿರಬಹುದೇ ಎಂಬ ಸಂಶಯ ಬರುತ್ತಿದೆ ಎಂದರು.
ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಅನ್ಯಾಯವಾದರೆ ಸುಮ್ಮನಿರಲ್ಲ ಎನ್ನುವ ಶಾಸಕರು ಅದೇ ಕಾರ್ಯಕರ್ತನಿಂದ ಅನ್ಯಾಯವಾದವರಿಗೇಕೆ ಧೈರ್ಯ ಹೇಳಲ್ಲ ? ಅದೇ ಜೈಲಿನಲ್ಲಿ ಮೂಡುಬಿದಿರೆಯ ಹಿಂದೂ ಸಙಘಟನೆಯ ಕಾರ್ಯಕರ್ತರಿದ್ದರೂ ಅವರಲ್ಲಿ ಮಾತನಾಡದೆ ಕೇವಲ ಸಮಿತ್ರಾಜ ನೊಬ್ಬನಲ್ಲೇ ಮಾತನಾಡಿ ಬಂದಿದ್ದಾರೆ, ಇದರಿಂದಲೇ ಇವರಿಬ್ಬರ ನಡುವಿನ ಸಂಬಂಧ ಅರ್ಥ ಮಾಡಿಕೊಳ್ಳಬಹುದೆಂದು ಹೇಳಿದರು.
ನಾನು ಹೆಣ್ಮಕ್ಕಳನ್ನು ಕುಣಿಸಿ ಹಣಮಾಡುತ್ತೇನೆಂದು ಹೇಳಿ ನನ್ನ ತೇಜೋವಧೆ ಮಾಡಿದ್ದಾರೆ,ನಾನು ಪ್ರತಿಷ್ಠಿತ ವೈದ್ಯ ಕುಟುಂಬದಿಂದ ಬಂದವನು,ನನಗೆ ಆ ರೀತಿ ಹಣ ಮಾಡುವ ಅಗತ್ಯವೇ ಇಲ್ಲ, ನನಗೆ ಬಾರ್ & ರೆಸ್ಟಾರೆಂಟ್,ಹೋಟೆಲ್ ವ್ಯವಹಾರ ಇರುವುದು ನಿಜ,ಆದರೆ ಹೆಣ್ಮಕ್ಕಳನ್ನು ಕುಣಿಸಿ ವ್ಯವಹಾರ ಮಾಡಿಲ್ಲ ಎಂದು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳುತ್ತೇನೆ ಎಂದ ಅವರು ನನ್ನ ವಿರುದ್ಧ ಸುಳ್ಳು ಹೇಳಿಕೆ ನೀಡಿ ತೇಜೋವಧೆ ಮಾಡಿದ ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದರು ‌.
ಮಾಜಿ ಶಾಸಕರಾದ ಅಮರನಾಥ ಶೆಟ್ಟರಿಂದಾಗಲೀ ,ಅಭಯರಿಂದಾಗಲೀ ಮೂಡುಬಿದಿರೆಗೆ ಕೆಟ್ಟ ಹೆಸರು ಬಂದಿರಲಿಲ್ಲ,ಈಗ ಕೋಟ್ಯಾನ್ ಅವರೇ ಬೆಳೆಸಿದ ಸಮಿತ್ರಾಜ್ ನಿಂದಾಗಿ ಇಬ್ಬರಿಂದಲೂ ಮೂಡುಬಿದಿರೆಗೆ ಕಳಂಕ ತರುವ ಹೆಸರು ಬರುತ್ತಿದೆ ಎಂದು ಆರೋಪಿಸಿರುವ ಮಿಥುನ್ ರೈ, ಸಮಿತ್ ರಾಜನೊಂದಿಗಿರುವ ಇನ್ನಿತರ ಮೊಬೈಲ್ ಗಳನ್ನೂ ತನಿಖೆ ಮಾಡಬೇಕು, ಇನ್ನಷ್ಟು ಸಂಗತಿಗಳು ಹೊರಬೀಳಲಿದೆ ಎಂದರು.
ಎಫ್‌ಎಸ್.ಎಲ್ ವರದಿ ಇನ್ನೆರಡು ದಿನಗಳಲ್ಲೇ ಬರಲಿದೆ,ಸಮಿತ್ ರಾಜ್ ವಿರುದ್ಧ ಮತ್ತೆರಡು ಪ್ರಕರಣಗಳು ದಾಖಲಾಗಲಿದೆ,ಆತನಿಂದ ಅನ್ಯಾಯಕ್ಕೊಳಗಾದವರು ನಮ್ಮನ್ನು ಧೈರ್ಯವಾಗಿ ಸಂಪರ್ಕಿಸಬಹುದು,ನಾವು ಅವರ ಹೆಸರನ್ನು ಗೌಪ್ಯವಾಗಿಟ್ಟು ನ್ಯಾಯ ದೊರಕಿಸಿಕೊಡುತ್ತೇವೆ ಎಂದರು.
ಪ್ರಮುಖರಾದ ಪುರಂದರ ದೇವಾಡಿಗ,ರುಕ್ಕಯ್ಯ ಪೂಜಾರಿ, ಸುರೇಶ್ ಕೋಟ್ಯಾನ್, ಹರ್ಷವರ್ಧನ ಪಡಿವಾಳ್,ಪ್ರವೀಣ್ ಕುಮಾರ್,ಜೊಸ್ಸಿ ಮಿನೇಜಸ್, ಚಂದ್ರಹಾಸ ಸನಿಲ್, ರಾಜೇಶ್ ಕಡಲಕೆರೆ, ಸುರೇಶ್ ಪ್ರಭು,ಸತೀಶ್ ಕೋಟ್ಯಾನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top