ವಿದ್ಯಾರ್ಥಿಗಳು ಶಿಸ್ತು, ಸಂಯಮ, ಹಿರಿಯರಿಗೆ ಗೌರವ ನೀಡುವ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು: ಕೋಟ್ಯಾನ್

Picture of Namma Bedra

Namma Bedra

Bureau Report

ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಕಲಿಕೆಯ ಜೊತೆಗೆ ಶಿಸ್ತು, ಸಂಯಮ, ಹಿರಿಯರಿಗೆ ಗೌರವ ನೀಡುವ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು, ಇಂತಹ ವ್ಯಕ್ತಿತ್ವ ಜೀವನದ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಹೇಳಿದರು.
ಅಳಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ನಡೆದ ಶೂ,ಸಾಕ್ಸ್, ಸಮವಸ್ತ್ರ ವಿತರಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಭಶಗವಹಿಸಿ ಮಾತನಾಡಿದ ಅವರು ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮತ್ತಷ್ಟು ಹೆಚ್ಚು ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು ಶ್ರಮವಹಿಸಬೇಕು,ಅಧ್ಯಾಪಕ ವೃಂದ ಕೂಡಾ ಉತ್ತಮ ಫಲಿತಾಂಶಕ್ಕಾಗಿ ಪ್ರಯತ್ನಪಡಬೇಕು,ಶಿಕ್ಷಣಾಧಿಕಾರಿಯವರು ಕೂಡಾ ಎರಡು ತಿಂಗಳಿಗೊಮ್ಮ ಶಾಲೆಗೆ ಭೇಟಿ ನೀಡಿ ಪರಿಶೀಲಿಸುತ್ತಿರಬೇಕು ಎಂದರು.
ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಅವರು ಸನ್ಮಾನಿಸಿದರು.


ಶಾಲೆಯ ಹಳೆವಿದ್ಯಾರ್ಥಿ,ಹೈಕೋರ್ಟ್ ನ್ಯಾಯವಾದಿಯಾಗಿರುವ ಚಂದ್ರವರ್ಮ ಜೈನ್, ಹೇಮಾ ಸಭಾಭವನದ ಮಾಲಕಿ ಹೇಮಾ ಕೆ.ಕೆ ಪೂಜಾರಿ ಹಾಗೂ ರಾಜ್ಯಮಟ್ಟದ ಕಬಡ್ಡಿ ತೀರ್ಪುಗಾರರಾಗಿ ಆಯ್ಕೆಯಾಗಿರುವ ಇದೇ ಹೈಸ್ಕೂಲ್ ನ ಶಾರೀರಿಕ ಶಿಕ್ಷಕ ಭಾಸ್ಕರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್, ವಾಲ್ಪಾಡಿ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ, ತಾ.ಪಂ.ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ, ಕಾಲೇಜು ಪ್ರಾಂಶುಪಾಲರಾದ ಚಂದ್ರಶೇಖರ್,ಉದ್ಯಮಿ ಮಹಾವೀರ್ ಜೈನ್ ಅಳಿಯೂರು, ಅಶ್ವಥ್ ಪಣಪಿಲ,ಸುಕೇಶ್ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷ ಗಣೇಶ್ ಬಿ.ಅಳಿಯೂರು, ಹರೀಶ್,ಪ್ರಮೀಳ,ಆಶಾಲತಾ ,ಪ್ರೌಢಶಾಲಾ ಮುಖ್ಯೋಪಾಧ್ಯಾಯ ಚಿನ್ಮಯಾನಂದ ಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಧ್ಯಾಪಕ ಸುಬ್ರಹ್ಮಣ್ಯ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು‌ .ಅಧ್ಯಾಪಕರಾದ ಮಹಾದೇವ ಮೂಡುಕೊಣಾಜೆ, ರಂಜನಾ, ಆ್ಯನಿ ಡಿಂಪಲ್ ಕ್ಯಾಸ್ತಲಿನೋ,ರೇಖಾ ,ಮಂಜುಳಾ, ರಂಜನಾ,ಮಣಿತಾ ಮತ್ತಿತರರು ವಿದ್ಯಾರ್ಥಿಗಳು ಮತ್ತು ಸನ್ಮಾನಿತರನ್ನು ಪರಿಚಯಿಸಿದರು.ವಿದ್ಯಾ ಅವರು ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top