‘ ರಾಜ್ಯ ಸರಕಾರ ನೀಡಿದ ಅನುದಾನಗಳನ್ನು ಮರೆತು ಬಿಟ್ಟಿರ ಶಾಸಕರೇ ‘…..? * ಮೂಡುಬಿದಿರೆ ಶಾಸಕ,ಬಿಜೆಪಿ ನಾಯಕರ ಸುಳ್ಳಿನ ವಿರುದ್ಧ ಡಿಜಿಟಲ್ ಪೋಸ್ಟರ್ ಬಿಡುಗಡೆಗೊಳಿಸಿದ ಬೆದ್ರ ಕಾಂಗ್ರೆಸ್

Picture of Namma Bedra

Namma Bedra

Bureau Report

ಮೂಡುಬಿದಿರೆ ಶಾಸಕರು ಮತ್ತು ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕೆಲಸಗಳ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳಿಗೆ ವಿರುದ್ಧವಾಗಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿಯು ಹಮ್ಮುಕೊಂಡ ಡಿಜಿಟಲ್ ಪೋಸ್ಟರ್ ಅಭಿಯಾನಕ್ಕೆ ಮಾಜಿ ಸಚಿವ ಕೆ.ಅಭಯಚಂದ್ರ ಅವರಿಂದು ಚಾಲನೆ ನೀಡಿದರು.


ಬಿಜೆಪಿ ನಾಯಕರು ಕಾಂಗ್ರೆಸ್ ಸರಕಾರದ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳಿಗೆ ನಾವು ಈ ಡಿಜಿಟಲ್ ಪೋಸ್ಟರ್ ಮೂಲಕ ಜನರಿಗೆ ಸತ್ಯ ತಿಳಿಸುವ ಕೆಲಸ ಮಾಡುತ್ತಿದ್ದೇವೆ, ರಾಜ್ಯದಲ್ಲಿ ಮೂಡುಬಿದಿರೆಯಲ್ಲೇ ಮೊದಲಾಗಿ ಈ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.
‘ ಮೂಡುಬಿದಿರೆ ತಾಲೂಕು ಪುತ್ತಿಗೆ ದೇವಸ್ಥಾನದಿಂದ ಸಂಪಿಗೆ ದ್ವಾರ ತನಕ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡಲು ರಾಜ್ಯ ಸರಕಾರ ಮೂರು ಕೋಟಿ ರೂ.ಅನುದಾನ ನೀಡಿದೆ, ಇದನ್ನು ಮರೆತು ಬಿಟ್ಟಿರ ಶಾಸಕರೇ’
‘ ಮೂಡುಬಿದಿರೆ ತಾಲೂಕು ಪಣಪಿಲ ಗ್ರಾಮದ ಬಿರ್ಮೆರಬೈಲು ಸೇತುವೆ ನಿರ್ಮಾಣ ಮಾಡಲು ರಾಜ್ಯ ಸರಕಾರ ಒಂದು ಕೋಟಿ ರೂ.ಅನುದಾನ ನೀಡಿದೆ..ಇದನ್ನು ಮರೆತು ಬಿಟ್ಟಿರ ಶಾಸಕರೇ ‘….
‘ ಮೂಡುಬಿದಿರೆ ತಾಲೂಕು ವಾಲ್ಪಾಡಿ ಗ್ರಾಮದ ಅಳಿಯೂರು ಕಾಲೇಜು ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರಕಾರ ಒಂದು ಕೋಟಿ ರೂ.ಅನುದಾನ ನೀಡಿದೆ..ಇದನ್ನು ಮರೆತು ಬಿಟ್ಟಿರ ಶಾಸಕರೇ ‘
ಈ ರೀತಿಯ ಡಿಜಿಟಲ್‌ ಪೋಸ್ಟರ್ ಗಳನ್ನು ‘ಸುಳ್ಳಿನ ವಿರುದ್ಧ ನಾವೆಲ್ಲಾ’ ಎಂಬ ತಲೆಬರಹದಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡಲಾಗುತ್ತಿದೆ.
ಅರುಣ್ ಕುಮಾರ್ ಶೆಟ್ಟಿ, ಪುರಂದರ ದೇವಾಡಿಗ,ವಲೇರಿಯನ್ ಸಿಕ್ವೇರಾ, ರಾಜೇಶ್ ಕಡಲಕೆರೆ,ಅನೀಶ್ ಡಿಸೋಜ, ರಜನಿ,ಪ್ರದೀಪ್ ಪಣಪಿಲ, ಇಕ್ಬಾಲ್ ಕರೀಮ್,ಸುಕುಮಾರ್ ಜೈನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top