ಮಂಗಳೂರು-ಮೂಡುಬಿದಿರೆ-ಕಾರ್ಕಳ ರಸ್ತೆಗೆ ಸರಕಾರಿ ಬಸ್ಸುಗಳ ಓಡಾಟ ಶುರುವಾಗಿ ಎರಡ್ಮೂರು ತಿಂಗಳು ಕಳೆದಿದೆ.ಅದಕ್ಕೆ ಮೂಲ ಕಾರಣ ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಎನ್ನುವುದರಲ್ಲಿ ಎರಡುಮಾತಿಲ್ಲ.
ಅದು ತಾತ್ಕಾಲಿಕ ಪರ್ಮಿಟ್ ಆಗಿತ್ತು ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಆ ತಾತ್ಕಾಲಿಕ ಪರ್ಮಿಟ್ ನ ಅವಧಿ ಆ.7 ಕ್ಕೆ ಮುಕ್ತಾಯಗೊಂಡಿತ್ತು. ಮತ್ತೆ ಸರಕಾರಿ ಬಸ್ಸುಗಳು ಓಡಾಡಬೇಕಿದ್ದರೆ ಪರ್ಮಿಟ್ ಮುಂದುವರಿಯಬೇಕಿತ್ತು.
ಈ ನಡುವೆ ಪರ್ಮಿಟ್ ಮುಂದುವರಿಸಬಾರದು ಎಂದು ಖಾಸಗಿ ಲಾಬಿ ನಡೆಯುತ್ತಿತ್ತೆಂದೂ, ಕರಾವಳಿಯ ಕೆಲ ಪ್ರಮುಖರು ಸೇರಿಕೊಂಡು ಮೂರೇ ತಿಂಗಳಿಗೆ ಸರಕಾರಿ ಬಸ್ ಗಳ ಓಡಾಟಕ್ಕೆ ಬ್ರೇಕ್ ಹಾಕಿಸಲು ಪ್ರಯತ್ನಿಸಿದ್ದರೆಂದು ಹೇಳಲಾಗುತ್ತಿದೆ.

ಈಬಗ್ಗೆ ಮಾಹಿತಿ ತಿಳಿದ ಅರುಣ್ ಕುಮಾರ್ ಶೆಟ್ಟಿ ಅವರು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಈ ರೂಟ್ ನ ಪರ್ಮಿಟ್ ಕ್ಯಾನ್ಸಲ್ ಮಾಡಲೇಬಾರದು,ಕ್ಯಾನ್ಸಲ್ ಆದಲ್ಲಿ ಬಡಜನರಿಗೆ ಇದರಿಂದ ಅನ್ಯಾಯವಾಗುತ್ತದೆ, ಮೂರೇ ತಿಂಗಳಿಗೆ ಸ್ಟಾಪ್ ಆಯಿತೆಂದು ಸರಕಾರಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದು ಮನವರಿಕೆ ಮಾಡಿ ಮತ್ತೆ ಮನವಿ ಮಾಡಿದ್ದರು.
ಅಂತೂ ಈ ವಿಚಾರದಲ್ಲಿ ಅರುಣ್ ಕುಮಾರ್ ಶೆಟ್ಟಿ ಅವರ ಮತ್ತೊಂದು ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.






