ಸುಧಾ ಜ್ಯುವೆಲ್ಲರ್ಸ್ ಮಾಲಕ ಶ್ರೀಧರ ಆಚಾರ್ಯ ನಿಧನ

Picture of Namma Bedra

Namma Bedra

Bureau Report

ಮೂಡುಬಿದಿರೆಯ ಪ್ರಸಿದ್ಧ ಸುಧಾ ಜ್ಯುವೆಲ್ಲರ್ಸ್ ನ ಮಾಲಕ ಶ್ರೀಧರ ಆಚಾರ್ಯ (84) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾದರು.
ಮೂಡುಬಿದಿರೆಯಲ್ಲಿ ಪ್ರಸಿದ್ಧ ಸ್ವರ್ಣೋದ್ಯಮಿಯಾಗಿದ್ದ ಅವರು ಸುಧಾ ಜ್ಯುವೆಲ್ಲರ್ಸ್, ಲಕ್ಷ್ಮೀ ಜ್ಯುವೆಲ್ಲರ್ಸ್ ನ ಸ್ಥಾಪಕರಾಗಿದ್ದರು.
ಮೂಡುಬಿದಿರೆ ಗುರುಮಠ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ 1997- 2002 ರ ಅವಧಿಯಲ್ಲಿ ಎರಡನೇ ಮೊಕ್ತೇಸರರಾಗಿ ಸೇವೆ ಸಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು.
ಮೃತರು ಪತ್ನಿ, ಐದು ಮಂದಿ ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top