ಅನಾಥನ ಅಂತ್ಯಕ್ರಿಯೆ ನೆರವೇರಿಸಿದ ಇರುವೈಲ್ ಫ್ರೆಂಡ್ಸ್ ಕ್ಲಬ್

Picture of Namma Bedra

Namma Bedra

Bureau Report

ಸಂಜೀವ. ಇವರು ಇರುವೈಲು ಹೊಸಮಾರಪದವು ನಿವಾಸಿ. ಹೆಂಡ್ತಿ ಮಕ್ಕಳು, ಸಂಸಾರ ಯಾರೂ ಇಲ್ಲ. ಇದ್ದರೂ ಎಲ್ಲಿದ್ದಾರೋ ಗೊತ್ತಿಲ್ಲ. ತಾಯಿ ಮಗ ಮಾತ್ರ ಇದ್ದವರು.ತಾಯಿ ವಯೋಸಹಜವಾಗಿ ಕಳೆದ ವರ್ಷ ತೀರಿಕೊಂಡಿದ್ದರು.ತಾಯಿಯನ್ನು ಕಳೆದುಕೊಂಡ ನಂತರ ಮತ್ತೆ ಏಕಾಂಗಿಯಾಗಿ ಅನಾಥರಾಗಿದ್ದರು ಸಂಜೀವ.
ಅವರ ಅಸಹಾಯಕತೆ,ಏಕಾಂಗಿ ಬದುಕನ್ನು ಕಂಡ ಇರುವೈಲ್ ಫ್ರೆಂಡ್ಸ್ ಕ್ಲಬ್ ನವರು ಅಶ್ರಮಕ್ಕೆ ಸೇರಿಸಿದ್ದರು.ಕೆಲಕಾಲ ಆಶ್ರಮದಲ್ಲಿದ್ದ ಸಂಜೀವ ಅವರು ಸೋಮವಾರ ಆಶ್ರಮದಲ್ಲೇ ತೀರಿಕೊಂಡರು.ಅಂತ್ಯಕ್ರಿಯೆ ನೆರವೇರಿಸಲು ಯಾರೂ ಇಲ್ಲದಾದಾಗ ಇದೇ ಫ್ರೆಂಡ್ಸ್ ಕ್ಲಬ್ ನವರು ಮುಂದೆ ಹೋಗಿ ಶವವನ್ನು ಇರುವೈಲಿಗೆ ತಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.


ಅವರ ನೇತ್ರವನ್ನು ದಾನ ಮಾಡಿಸುವ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದಾರೆ. ಸಂಜೀವ ಅವರ ತಾಯಿ ತೀರಿಕೊಂಡಾಗಲೂ ಅವರ ಅಂತ್ಯಕ್ರಿಯೆ ನೆರವೇರಿಸಿದ್ದು ಕೂಡ ಇದೇ ಫ್ರೆಂಡ್ಸ್ ಕ್ಲಬ್.
ಅನಾಥನ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಸೇವೆ ಮಾಡಿದ ಇರುವೈಲ್ ಫ್ರೆಂಡ್ಸ್ ಕ್ಲಬ್ ನವರು ಇತರರಿಗೆ ಮಾದರಿಯಾಗಿದ್ದಾರೆ.
ಅಂತ್ಯಕ್ರಿಯೆ ನೆರವೇರಿಸುವ ವೇಳೆ ಫ್ರೆಂಡ್ಸ್ ಕ್ಲಬ್ ನ ಪ್ರವೀಣ್ ಪೂಜಾರಿ, ಭರತ್ ಶೆಟ್ಟಿ, ರಾಜೇಶ್ ಪೂಜಾರಿ ಕಾಳೂರು,ಪ್ರದೀಪ್ ಶೆಟ್ಟಿ, ದಿನೇಶ್ ಪ್ರಭು,ದಯಾನಂದ ಪೂಜಾರಿ, ನಿತಿನ್ ಮತ್ತಿತರರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top