ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರ

Picture of Namma Bedra

Namma Bedra

Bureau Report

ಕೆ.ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಲವು ಸಮಾಜಮುಖಿ ಕಾರ್ಯಗಳ ಧ್ಯೇಯೋದ್ದೇಶಗಳನ್ನು ಹೊಂದಿದ್ದು ಈ ನಿಟ್ಟಿನಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರವು ಆಗಸ್ಟ್ 24 ರಂದು ಬೆಳಿಗ್ಗೆ 9-45 ಕ್ಕೆ ಮೂಡುಬಿದಿರೆಯ ಕನ್ನಡಭವನದಲ್ಲಿ ನಡೆಯಲಿದೆ ಎಂದು ಟ್ರಸ್ಟಿ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ತಾಲೂಕಿನ ಶಾಲೆಗಳಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಟ್ರಸ್ಟ್ ಮುಂದಿನ ದಿನಗಳಲ್ಲಿ ದಂತ ಚಿಕಿತ್ಸೆ ಮುಂತಾದ ಶಿಬಿರಗಳನ್ನು ನಡೆಸಲಿದೆ ಎಂದ ಅವರು ಮುಲ್ಕಿ ಮತ್ತು ಕಿನ್ನಿಗೋಳಿ ಪರಿಸರಸದ ಸರಕಾರಿ ಶಾಲೆಗಳಲ್ಲಿ ಮತ್ತು ಭಿನ್ನ ಸಾಮರ್ಥ್ಯದ ಮಕ್ಕಳಿಗೂ ಶಿಬಿರಗಳನ್ನು ನಡೆಸಲಿದೆ ಎಂದರು.
ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ,ಗ್ರಾಮೀಣ ಭಾಗದ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಿಕ್ಷಣದ ಆದ್ಯತೆ ಮತ್ತು ಸರ್ವಾಂಗೀಣ ಬೆಳವಣಿಗೆ, ವಿಶಿಷ್ಟ ಮಕ್ಕಳ ಸಬಲೀಕರಣ,ಪರಿಸರ ಸಂರಕ್ಷಣೆ ಟ್ರಸ್ಟ್ ನ ಧ್ಯೇಯೋದ್ದೇಶವಾಗಿದೆ ಎಂದರು.
ತಂದೆ ಅಮರನಾಥ ಶೆಟ್ಟಿ ಅವರು ತಮ್ಮ ಜೀವನದುದ್ದಕ್ಕೂ ದೀನ ದಲಿತರ ಸೇವೆ,ಪರೋಪಕಾರ ಹಾಗೂ ಸ್ವಾಸ್ಥ್ಯ ಸಮಾಜಕ್ಕೋಸ್ಕರ ಜೀವನ ಸವೆಸಿದ ಅತ್ಯಮೂಲ್ಯ ರತ್ನ ಎಂದು ನೆನಪಿಸಿಕೊಂಡ ಅವರು ಅವರ ಹೆಸರಿನಲ್ಲಿ ನಮ್ಮ ಟ್ರಸ್ಟ್ ಬಡ ಜನರಿಗೆ,ವಿದ್ಯಾರ್ಥಿಗಳಿಗೆ ,ಮಹಿಳೆಯರಿಗೆ ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದ ಅವರು ಊರಿನ ಆರೋಗ್ಯ ಕಾಪಾಡುವ ಆಶಾ ಕಾರ್ಯಕರ್ತೆಯರ,ಅಂಗನವಾಡಿ ಕಾರ್ಯಕರ್ತೆಯರ ಆರೋಗ್ಯದ ಕಾಳಜಿ ವಹಿಸಲು ನಮ್ಮ ಟ್ರಸ್ಟ್ ಆದ್ಯತೆ ವಹಿಸಿದ್ದು 24 ರಂದು ನಡೆಯುವ ಈ ಶಿಬಿರವನ್ನು ಜೈನಮಠದ ಸ್ವಾಮೀಜಿಯವರು ಉದ್ಘಾಟಿಸಲಿದ್ದು ಮಂಗಳೂರಿನ ಖ್ಯಾತ ವೈದ್ಯರಾದ ಡಾ.ಎಂ.ಶಾಂತರಾಮ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ‌.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ, ಡಾ.ಎಂ.ಮೋಹನ ಆಳ್ವ,ಪದ್ಮರಾಜ ರಾಮಯ್ಯ,ಅದಾನಿ ಗ್ರೂಪ್ ನ ಕಿಶೋರ್ ಆಳ್ವ,ಕುಲದೀಪ್ ಎಂ,ಕೆ.ಶ್ರೀಪತಿ ಭಟ್,ಪ್ರಶಾಂತ್ ಶೆಟ್ಟಿ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಟ್ರಸ್ಟಿಗಳಾದ ಜಯಶ್ರೀ ಅಮರನಾಥ ಶೆಟ್ಟಿ, ಆಶ್ರಿತಾ ಪಿ.ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top