ಬೆದ್ರ ದೊಡ್ಮನೆ ಫ್ರೆಂಡ್ಸ್ ಹೊಸ ಲೋಗೋ ಅನಾವರಣ

Picture of Namma Bedra

Namma Bedra

Bureau Report

ಕಳೆದ ಒಂಭತ್ತು ವರ್ಷಗಳಿಂದ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಮೂಡುಬಿದಿರೆ ದೊಡ್ಮನೆ ಫ್ರೆಂಡ್ಸ್ ನ ಹೊಸ ಲೋಗೋವನ್ನು ಮೂಡುಬಿದಿರೆ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ.ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ ಕಳೆದ 9 ವರ್ಷಗಳಿಂದ ಸ್ವಚ್ಚತಾ ಕಾರ್ಯಕ್ರಮ, ಚಂದ್ರಶೇಖರ ದೇವರ ಹಾಗೂ ಶ್ರೀ ಗೌರಿ ದೇವರ ಜಾತ್ರಾ ಸಂದರ್ಭದಲ್ಲಿ ಮಾಡಿರುವ ಸೇವೆ ,ನೂರಾರು ವರ್ಷಗಳ ಇತಿಹಾಸದ ಚಂದ್ರಶೇಖರ ದೇವರ ಪುಷ್ಕರಣೆಯು ಪಾಳು ಬಿದ್ದಿದ್ದ ಸಂದರ್ಭದಲ್ಲಿ ಅದನ್ನು ಮರು ನಿರ್ಮಾಣಗೊಳಿಸಿರುವುದಲ್ಲದೆ ಮೂಡುಬಿದಿರೆ ಗಣೇಶೋತ್ಸವದ ಶೋಭಾಯಾತ್ರೆಯ ಸಂದರ್ಭದಲ್ಲಿ ತಮ್ಮ ತಂಡವು ಶಿಸ್ತುಬದ್ಧವಾಗಿ ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು,ಹೊಸಲೋಗೋ ಮೂಲಕ ಇನ್ನಷ್ಟು ಧಾರ್ಮಿಕ, ಸಾಮಾಜಿಕ ಸೇವೆ ಮುಂದುವರಿಯಲಿ’ ಎಂದು ಶುಭ ಹಾರೈಸಿದರು.


ಶ್ರೀ ಗೌರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ರಾಜೇಶ್ ಭಟ್,ಬೆದ್ರ ಫ್ರೆಂಡ್ಸ್ ನ ಪ್ರಜ್ವಲ್ ಕುಲಾಲ್,ಸರ್ವೋದಯ ಫ್ರೆಂಡ್ಸ್ ನ ಪ್ರಕಾಶ್ ಕುಂದರ್,ಪವರ್ ಫ್ರೆಂಡ್ಸ್ ನ ಸುಧಾಕರ ಶೆಟ್ಟಿ, ದೊಡ್ಮನೆ ಫ್ರೆಂಡ್ಸ್ ತಂಡದ ಓಮಯ್ಯ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜೇಶ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top