ಮಂಗಳೂರು: ದ.ಕ. ಜಿಲ್ಲಾ ಚೆಸ್ ಅಸೋಸಿಯೇಶನ್‌ನ ನೂತನ ಅಧ್ಯಕ್ಷೆಯಾಗಿ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ.
ಅವರು ಮುಂದಿನ ಮೂರು ವರ್ಷಗಳ(2025-28)ಅವಧಿಗೆ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾ.ವಾಣಿ ಎಸ್.ಪಣಿಕರ್ ಮತ್ತು ವಕೀಲ ನಾರಾಯಣ್ ಎಲ್., ಕಾರ್ಯದರ್ಶಿ ರಮ್ಯಾ ಎಸ್.ರೈ, ಜತೆ ಕಾರ್ಯದರ್ಶಿ ನಿಶಾ ಪಣಿಕ್ಕರ್, ಕೋಶಾಧಿಕಾರಿ ಕ್ರತಿನ್ ಕುಮಾರ್ ಹಾಗೂ ಶುಭಮಂಗಳ ಕೋಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.













