ಗ್ಯಾರೇಜ್ ಮಾಲಕರ ಸಂಘದಿಂದ ಗಾಂಧಿನಗರ ಶಾಲೆಗೆ 40 ಕುರ್ಚಿಗಳ ಕೊಡುಗೆ

Picture of Namma Bedra

Namma Bedra

Bureau Report

ಮೂಡುಬಿದಿರೆ ವಲಯ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಗಾಂಧಿನಗರ ಸ.ಹಿ.ಪ್ರಾ.ಶಾಲೆಗೆ 40 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಸಂಘದ ಅಧ್ಯಕ್ಷ ಗುರುಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಶಂಕರ್ ಎ.ಕೋಟ್ಯಾನ್, ಉಪಾಧ್ಯಕ್ಷ ನಿತ್ಯಾನಂದ ಸಾಲ್ಯಾನ್,ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್, ಪುರಸಭಾ ಸದಸ್ಯೆ ದಿವ್ಯಾ ಜಗದೀಶ್, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಸುನೀತಾ ಶೆಟ್ಟಿ, ಸದಸ್ಯರು, ಮುಖ್ಯ ಶಿಕ್ಷಕಿ ಕಸ್ತೂರಿ ಎಚ್,ಶಿಕ್ಷಕಿಯರಾದ ಭವ್ಯಾ,ಸುಪ್ರಿತಾ,ಅಕ್ಷತಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಯಶೋಧರ ವಿ.ಬಂಗೇರ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top