ಪಡುಮಾರ್ನಾಡು ಪರಿಸರದಲ್ಲಿ ಮೊಬೈಲ್ ನೆಟ್ವರ್ಕ್ ಪ್ರಾಬ್ಲೆಮ್ ಕಳೆದ ಕೆಲವು ಸಮಯಗಳಿಂದ ಇತ್ತು.ಕಾಲ್ ಹೋಗದೆ,ಹೋದರೂ ಕೇಳಿಸದೆ,ಕೇಳಿದರೂ ಅರ್ಥವಾಗದೆ ‘ ಉಂದೆಂಚಿನ ನೆಟ್ವರ್ಕ್ ಕರ್ಮ’ ಎಂದು ಬಯ್ಯುತ್ತಿದ್ದವರೇ ಹೆಚ್ಚು.
‘ಯೆಸ್, ಇಲ್ಲೊಂದು ಸಮಸ್ಯೆ ಇದೆ, ಖಂಡಿತಾ ಸಮಸ್ಯೆ ಇದೆ’ ಎಂದು ಅರಿತುಕೊಂಡವರು ಇಲ್ಲಿನ ಜನಪ್ರಿಯ ಜನಪ್ರತಿನಿಧಿ ರಮೇಶ್ ಶೆಟ್ಟಿ.
ಊರ ಜನರಿಂದ ‘ಬಬ್ಬಣ್ಣ’ ಎಂದೇ ಕರೆಸಿಕೊಳ್ಳುವ ರಮೇಶ್ ಶೆಟ್ಟಿ ಅವರು ಈ ಭಾಗದಲ್ಲಿ ನಿರಂತರವಾಗಿ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುತ್ತಾ ಬಂದವರು.ಯುವಕ ಮಂಡಲದ ಅಧ್ಯಕ್ಷರಾಗಿ,ಸದಸ್ಯರಾಗಿ,ಬೇರೆಬೇರೆ ಸಮಿತಿಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಅವರದ್ದು ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯ ಹೆಸರು.


ತನ್ನ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಪ್ರಾಬ್ಲೆಮ್ ಇದೆ ಎಂದರಿತು ಕೂಡಲೇ ಕಾರ್ಯಪ್ರವೃತ್ತರಾದ ಅವರು ಕಂದಾಯ ಇಲಾಖೆಗೆ ಮನವರಿಕೆ ಮಾಡಿ,ಸರಕಾರಿ ಜಾಗವನ್ನು ಮಂಜೂರುಗೊಳಿಸಿ ಅಲ್ಲೊಂದು ಟವರ್ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.ಇನ್ನು ಈ ಭಾಗದ ಜನರ ಮೊಬೈಲ್ ನೆಟ್ವರ್ಕ್ ಗೆ ನೋ ಪ್ರಾಬ್ಲೆಮ್!
ಇಂದಿನ ದಿನಗಳಲ್ಲಿ ಎಲ್ಲ ವರ್ಗದ ಜನರಿಗೂ ಅತೀ ಅಗತ್ಯವಾಗಿದ್ದ ಈ ಬೇಡಿಕೆಗೆ ಸ್ಪಂದಿಸಿ ,ಟವರ್ ನಿರ್ಮಾಣದ ಮೂಲಕ ಬಹುದಿನಗಳ ಸಮಸ್ಯೆಗೆ ಪರಿಹಾರ ಒದಗಿಸಿದ ಬಬ್ಬಣ್ಣನಿಗೆ ಪಡುಮಾರ್ನಾಡು ಜನತೆ ಕೃತಜ್ಞತೆ ಸಲ್ಲಿಸಿದ್ದಾರೆ.













