ಶಿರ್ತಾಡಿ ಗ್ರಾಮದ ದಡ್ಡಾಲ್ಪಲ್ಕೆಯಲ್ಲಿ ಸಾರ್ವಜನಿಕ ಬೇಡಿಕೆ ಮೇರೆಗೆ ವಿದ್ಯುತ್ ಉಪಕೇಂದ್ರದ ಕಾಮಗಾರಿಯು ಮುಕ್ತಾಯ ಹಂತದಲ್ಲಿದೆ. ಕೆ.ಪಿ.ಟಿ.ಸಿ.ಎಲ್. ವಿಭಾಗದಿಂದ ಇನ್ನೂ ಟ್ರಾನ್ಸ್ಫಾರ್ಮಾರ್ ಅಳವಡಿಕೆ ನಡೆಯದ ಕಾರಣ ಈ ಭಾಗದ ಕೃಷಿಕರರಿಗೆ,ಸಾರ್ವಜನಿಕರಿಗೆ ಲೋ ವೋಲ್ಟೇಜ್ ಸಮಸ್ಯೆಯಿಂದ ತೊಂದರೆಯಾಗುತ್ತಿದೆ.ಹಾಗಾಗಿ ಕೆ.ಪಿ.ಟಿ.ಸಿ.ಎಲ್ ನಿಂದ ಶೀಘ್ರವಾಗಿ ಟ್ರಾನ್ಸ್ ಫಾರ್ಮಾರ್ ಅಳವಡಿಕೆಗೆ ಆದೇಶಿಸಿ ಇಲ್ಲಿನ ಸಮಸ್ಯೆಗೆ ಮುಕ್ತಿ ಕಾಣಿಸಬೇಕೆಂದು ಮಾಜಿ ಸಚಿವ ಕೆ.ಅಭಯಚಂದ್ರ ಅವರು ರಾಜ್ಯ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರಿಗೆ ಮನವಿ ಮಾಡಿದ್ದಾರೆ.
ಇಲ್ಲಿನ ಸಮಸ್ಯೆಯ ಕುರಿತು ತಾ.ಪಂ.ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ಅಭಯಚಂದ್ರರವರಲ್ಲಿ ಹೇಳಿಕೊಂಡಿದ್ದರು.ರುಕ್ಕಯ್ಯ ಪೂಜಾರಿ ಅವರ ಮನವಿಗೆ ಸ್ಪಂದಿಸಿದ ಅಭಯಚಂದ್ರರು ಇದೀಗ ಇಂಧನ ಸಚಿವರಿಗೆ ಮನವಿ ನೀಡಿದ್ದಾರೆ.
ಸುಕುಮಾರ್ ಜೈನ್ ಅಳಿಯೂರು, ಪ್ರದೀಪ್ ಪಣಪಿಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.













